ನೀರಿನ ತೊಟ್ಟಿಯಲ್ಲಿ ಕೊಳೆತ ಅಪರಿಚಿತ ಶವ

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಹೊರವಲಯದ ಆದಿಉಡುಪಿ ಫಿಶ್ ಮಾರ್ಕೆಟ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದೊಂದು ಕೊಲೆಯಾಗಿರಬೇಕೆಂದು ಶಂಕಿಸಲಾಗಿದೆ. ಆದಿ ಉಡುಪಿ ಫಿಶ್ ಮಾರ್ಕೆಟ್ ಬಳಿಯಿರುವ ಉಡುಪಿ ನಗರಸಭೆಗೆ ಸೇರಿದ ತೆರೆದ ನೀರಿನ ಟ್ಯಾಂಕಲ್ಲಿ ಶವ ಪತ್ತೆಯಾಗಿದೆ. ವ್ಯಕ್ತಿಯು ಸುಮಾರು 5-6 ದಿನದ ಹಿಂದೆ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದ್ದು,

ಕೊಳೆತು ಹೋದ ಪರಿಣಾಮ ಮಾರ್ಕೆಟ್  ವ್ಯಾಪಾರಿಗಳಿಗೆ ವಾಸನೆ ಬಂದಿದೆ. ಶವವನ್ನು ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಇದು ಕೊಲೆಯಾಗಿರಬೇಕೆಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆಯಿಂದ ಸತ್ಯಾಸತ್ಯತೆ ಗೊತ್ತಾಗಲಿದೆ. ಫಿಶ್ ಮಾರ್ಕೆಟ್ ಬಳಿ ಇರುವ ಉಡುಪಿ ನಗರಸಭೆಗೆ ಸೇರಿದ ತೆರೆದ ಕಾಂಕ್ರೀಟಿನ ನೀರಿನ ಟ್ಯಾಂಕಿಗೆ ಮುಚ್ಚಲ ಆಳವಡಿಸಬೇಕೆಂಬ ಆಗ್ರಹ ನಾಗರಿಕರಿಂದ ಕೇಳಿಬಂದಿದೆ.