ಅಧಿಕಾರ ಕೇಂದ್ರೀಕರಣ ಅಪಾಯಕಾರಿ

ಕರ್ನಾಟಕವನ್ನು ಗುರಿ ಮಾಡಿಕೊಂಡಂತೆ ಮೇಲಿಂದ ಮೇಲೆ ಸಿಬಿಐ ದಾಳಿ ನಡೆಯುತ್ತಿದೆ  ಅದಕ್ಕೆ ಸರಿಸಾಟಿಯಂತೆ ಎಸಿಬಿ ದಾಳಿಯೂ ನಡೆಸುತ್ತಿದೆ  ಆದರೆ ಇದರಿಂದ ಸಾಮಾನ್ಯ ಜನರನ್ನು ಮೂಢರನ್ನಾಗಿಸಲಾಗುತ್ತಿದೆಯೇ ಎಂಬ ಆತಂಕವೂ ಇದೆ  ದೇಶದಲ್ಲಿ ಚರ್ಚೆಯಾಗಬೇಕಾದ ವಿಷಯಗಳು ಬೇಕಾದಷ್ಟಿರುವಾಗ ಈ ನೋಟು ನಿಷೇಧ ಪ್ರಕರಣ ಅವೆಲ್ಲವನ್ನೂ ನುಂಗಿ ಹಾಕಿ ದೇಶವನ್ನು ಒಂದೇ ಚಿಂತನೆಯೆಡೆಗೆ ಕರೆದೊಯ್ಯುವ ಅಪಾಯಕಾರಿ ಸ್ಥಿತಿಯತ್ತ ಕೇಂದ್ರ ಸರಕಾರ ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ
ಆದರೆ ಈ ಸಂದರ್ಭದಲ್ಲಿ ಒಂದು ಸಂಗತಿಯನ್ನು ನೆನಪಿನಲ್ಲಿಡಬೇಕು  ಅಧಿಕಾರ ಎಲ್ಲೂ ಒಂದೇ ಕಡೆ ಕೇಂದ್ರೀಕೃತವಾಗುವುದು ಅಪಾಯಕಾರಿ

  • ವಿಕ್ಟರ್ ಡಿಸೋಜ 
    ಉದ್ಯಾವರ ಬೈಪಾಸ್ ಉಡುಪಿ