ಸಾಲದ ಶೂಲೆ : ರೈತ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಸಾಲ ಬಾಧೆ ತಾಳಲಾಗದೇ ರೈತನೊಬ್ಬ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಗುಡ್ನಾಪುರದಲ್ಲಿ ಬುಧವಾರ ಸಂಜೆ ನಡೆದಿದೆ. ಬಂಗಾರಪ್ಪ ನಾಯ್ಕ (67) ಆತ್ಮಹತ್ಯೆಗೆ ಶರಣಾದ ರೈತರಾಗಿದ್ದು, ವ್ಯವಸಾಯ ಸೇವಾ ಸಂಘದಲ್ಲಿ 5 ಲಕ್ಷ ರೂ, ಪಿ ಎಲ್ ಡಿ ಬ್ಯಾಂಕಿನಲ್ಲಿ 1.2 ಲಕ್ಷ ರೂ ಸಿಂಡಿಕೇಟ್ ಬ್ಯಾಂಕ್ ಬನವಾಸಿಯಲ್ಲಿ 10 ಲಕ್ಷ ರೂ ಸಾಲ ಮಾಡಿದ್ದ. ಬ್ಯಾಂಕಿನಿಂದ ನೋಟಿಸ್ ಸಹ ಬಂದಿತ್ತು. ಸುಮಾರು 12 ಎಕ್ರೆಯಷ್ಟು ಕೃಷಿ ಭೂಮಿ ಇದ್ದರೂ, 2012ರಿಂದ ಸಮರ್ಪಕ ಮಳೆಯಾಗದೇ ಸರಿಯಾಗಿ ಬೆಳೆಯೂ ಬಾರದೇ ಮನನೊಂದು ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಂಗಾರಪ್ಪರು ಕಾಂಗ್ರೆಸ್ ಮುಖಂಡ ಸುಧಾಕರ ನಾಯ್ಕರ ತಂದೆಯಾಗಿದ್ದಾರೆ. ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.