ಭಾರತದಲ್ಲಿ ಕಳೆದ ವರ್ಷ ಮರಣ ದಂಡನೆ ದ್ವಿಗುಣ

ಸಾಂದರ್ಭಿಕ ಚಿತ್ರ

ನವದೆಹಲಿ : ಜಗತ್ತಿನಾದ್ಯಂತ ಇತ್ತೀಚಿನ ವರ್ಷಗಳಲ್ಲಿ ಮರಣ ದಂಡನೆ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಭಾರತದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಮರಣ ದಂಡನೆ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಅಮ್ನೆಸ್ಟಿ ಇಂಟರ್‍ನ್ಯಾಶನಲ್ ಹೇಳಿದೆ.

ಅಮ್ನೆಸ್ಟಿಯ 2016ರ ವರದಿಯೊಂದರ ಪ್ರಕಾರ, ಕಳೆದ ವರ್ಷ 55 ರಾಷ್ಟ್ರಗಳಲ್ಲಿ 3,117 ಮಂದಿಗೆ ಮರಣ ದಂಡನೆ ನೀಡಲಾಗಿದೆ. 2015ರಲ್ಲಿ ಈ ಸಂಖ್ಯೆ 1,988 ಆಗಿತ್ತು. ಭಾರತದಲ್ಲಿ 2015ರಲ್ಲಿ 75 ಆಗಿದ್ದ ಮರಣ ದಂಡನೆ ಸಂಖ್ಯೆ 2016ರಲ್ಲಿ 136ಕ್ಕೆ ಏರಿದೆ.