ಪ್ರವಾದಿಯ ಅವಹೇಳನಗೈದ ಪಾಕ್ ಕೈಸ್ತಗೆ ಮರಣದಂಡನೆ

ಲಾಹೋರ್ : ವಾಟ್ಸಪ್ಪಿನಲ್ಲಿ ಇಸ್ಲಾಂ ವಿರೋಧಿ ವಿಷಯ ಹಂಚಿಕೊಂಡಿದ್ದ ಕ್ರಿಶ್ಚಿಯನ್ ವ್ಯಕ್ತಿಯೊಬ್ಬನಿಗೆ ಇಲ್ಲಿನ ಪೂರ್ವ ಪಾಕಿಸ್ತಾನದ ಕೋರ್ಟೊಂದು `ಧರ್ಮನಿಂದನೆ’ ಆರೋಪ ಎತ್ತಿಹಿಡಿದು, ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮುಸ್ಲಿಂ ಬಾಹುಳ್ಯದ ಪಾಕಿಸ್ತಾನದಲ್ಲಿ ಧರ್ಮ ನಿಂದನೆ ಮತ್ತು ಪ್ರವಾದಿ ಮೊಹಮ್ಮದ್ ಅವಹೇಳನ ಗುರುತರವಾದ ಕ್ರಿಮಿನಲ್ ಅಪರಾಧವಾಗಿದ್ದು, ಮರಣ ದಂಡನೆ ಶಿಕ್ಷೆ ಶತಸಿದ್ಧ. ನದೀಂ ಜೇಮ್ಸ್ (35) ಎಂಬಾತ 2016 ಜುಲೈಯಲ್ಲಿ ತನ್ನ ಮುಸ್ಲಿಂ ಗೆಳೆಯನೊಬ್ಬನೊಂದಿಗೆ ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಸಂದೇಶಗಳನ್ನು ವಾಟ್ಸಪ್ಪಿನಲ್ಲಿ ಹಂಚಿಕೊಂಡಿದ್ದ. ಈ ಬಗ್ಗೆ ಗೆಳೆಯನೇ ಕೋರ್ಟ್ ಮೆಟ್ಟಿಲೇರಿದ್ದ.