ಅಪಘಾತದಲ್ಲಿ ಸಾವು

ಯುವಕನ ಕುಟುಂಬದವರಿಗೆ 14.20 ಲಕ್ಷ ರೂ ಪರಿಹಾರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ವಾಹನ ಅಪಘಾತದಲ್ಲಿ ಸಾವಿಗೀಡಾದ ಬಂದಡ್ಕ ಪಾಲಾರ್ ಬೆಳ್ಳಿಪ್ಪಾಡಿ ಹೌಸಿನ ಮೈಲಪ್ಪ ಗೌಡರ ಪುತ್ರ ರೋಹಿತಾಕ್ಷ (30) ಅವರ ಆಶ್ರಿತರಿಗೆ ಓರಿಯೆಂಟಲ್ ಇನ್ಶೂರೆನ್ಸ್ ಕಂಪೆನಿಯ ಕಾಸರಗೋಡು ಶಾಖೆ 14,20,000 ರೂ ನಷ್ಟ ಪರಿಹಾರ ನೀಡುವಂತೆ ಕಾಸರಗೋಡು ಪ್ರಿನ್ಸಿಪಲ್ ಎಂಎಸಿಟಿ ನ್ಯಾಯಾಲಯ ತೀರ್ಪು ನೀಡಿದೆ.

2014 ಸೆಪ್ಟೆಂಬರ್ 7ರಂದು ಸಂಜೆ 6.30ಕ್ಕೆ ಬೈಕಿನಲ್ಲಿ ಉಪ್ಪಳ ಮುಟ್ಟಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಸಾವಿಗೀಡಾಗಿದ್ದರು. ತಾಯಿ ಮತ್ತು ಸಹೋದರಿ ಪರಿಹಾರ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.