ಯಡ್ಡಿಯೂರಪ್ಪರೇ, ಜಂಭದ ಮಾತು ಜನಪ್ರತಿನಿಧಿಗಳಿಗೆ ಶೋಭೆ ತರಲ್ಲ !

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡ್ಡಿಯೂರಪ್ಪರು ಹಿಂದುಳಿದ ವರ್ಗಗಳ ಸಮಾವೇಶ ಉದ್ಘಾಟಿಸಿ ರಾಜ್ಯದಲ್ಲಿ ತಾನು ಮರಳಿ ಮುಖ್ಯಮಂತ್ರಿಯಾದರೆ ಅಧಿಕಾರ ವಹಿಸಿಕೊಂಡ 24 ತಾಸಿನೊಳಗೆ ಮಹಾದಾಯಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿರುವುದು ಸಂತೋಷವಾದರೂ ಇದು ಸಾಧ್ಯವೇ ?

ವಿಚಿತ್ರವೆಂದರೆ, ಗೋವಾ, ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರಗಳಿವೆ. ಕೇಂದ್ರದಲ್ಲಿಯೂ ಯಡಿಯೂರಪ್ಪರು ಪ್ರತಿನಿಧಿಸುವ ಬಿಜೆಪಿ ಸರಕಾರವೇ ಅಧಿಕಾರದಲ್ಲಿದೆ. ಈಗಿರುವಾಗ ಮತ್ತೆ ರಾಜ್ಯ ರಾಜ್ಯದ ಮುಖ್ಯಮಂತ್ರಿಯಾದರೆ ಮಹಾದಾಯಿ ಸಮಸ್ಯೆಗೆ ಮುಕ್ತಿ ನೀಡುವೆ ಎಂಬ ಜಂಭದ ಮಾತು ಯಾಕೆ ? ಇದು ಜನಪ್ರತಿನಿಧಿಗಳಿಗೆ ಶೋಭೆ ತರಲ್ಲ. ಜನಪ್ರತಿನಿಧಿಗಳಾದವರು ಸ್ಪರ್ಧಾತ್ಮಕ ಮನೋಭಾವನೆಯಿಂದ ಜನರ ಸೇವೆ ಮಾಡಿ ಜನರನ್ನು ಪಕ್ಷಕ್ಕೆ ಒಲಿಸಿಕೊಳ್ಳಬೇಕು.

  • ವಿ ಜಿ, ಮಂಗಳೂರು