ಪೆಟ್ರೋಲ್, ಡೀಸೆಲ್ ಏಕರೂಪ ದರಕ್ಕೆ ಡೀಲರ್ ಒಕ್ಕೂಟ ಆಗ್ರಹ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪೆಟ್ರೋಲ್ ಮತ್ತು ಡೀಸೆಲಿಗೆ ಏಕರೂಪ ದರ ನಿಗದಿಪಡಿಸುವಂತೆ ಇಲ್ಲಿ ನಡೆದ ಎರಡುದಿನಗಳ ತೈಲ ಸಂಗಮ-2017ರಲ್ಲಿ ಕರ್ನಾಟಕ ರಾಜ್ಯ ಪೆಟ್ರೋಲಿಯಂ ಡೀಲರುಗಳ ಒಕ್ಕೂಟ ಸರ್ಕಾರಕ್ಕೆ ಆಗ್ರಹಿಸ ಸಲ್ಲಿಸಿತು.

ನಗರಗಳ ಮಾಲಿನ್ಯ ಹಿನ್ನೆಲೆಯಲ್ಲಿ ಬಹುತೇಕ ಮಂದಿ ಪೆಟ್ರೋಲ್ ವಾಹನಗಳನ್ನು ಖರೀದಿಸುತ್ತಿದ್ದಾರೆ ಎಂದು ಸಭೆ ಬಳಿಕ ಸುದ್ದಿಗಾರರಲ್ಲಿ ಹೇಳಿದ ಒಕ್ಕೂಟದ ಅಧ್ಯಕ್ ಎಚ್ ಎಸ್ ಮಂಜಪ್ಪ, “ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಪೆಟ್ರೋಲ್ ವಾಹನಗಳು ದುಬಾರಿಯಾಗಿರುವುದರಿಂದ ಈಗ ಜನರು ಹೆಚ್ಚೆಚ್ಚು ಡೀಸೆಲ್ ವಾಹನಗಳ ಖರೀದಿಗೆ ಒಲವು ತೋರಿಸುತ್ತಿದ್ದಾರೆ. ಒಂದೊಮ್ಮೆ ಡೀಸೆಲ್ ಮತ್ತು ಪೆಟ್ರೋಲ್ ದರದಲ್ಲಿ ಏಕರೂಪ ಕಲ್ಪಿಸಿದರೆ, ಜನರು ಪೆಟ್ರೋಲ್ ವಾಹನಗಳ ಖರೀದಿಗೆ ಹೆಚ್ಚು ಒಲವು ತೋರಿಸುತ್ತಾರೆ. ಆಗ ಡೀಸೆಲಿನಿಂದ ಪರಿಸರದಲ್ಲಿ ತುಂಬಬಹುದಾದ ಅಧಿಕ ಪ್ರದೂಷಣೆಗೆ ನಿಯಂತ್ರಣ ಹೇರಬಹುದಾಗಿದೆ” ಎಂದರು.

ಪ್ರಸಕ್ತ ಪೆಟ್ರೋಲ್ ಮೇಲಿರುವ ತೆರಿಗೆ ಮೊತ್ತ ಶೇ 30ರಷ್ಟು ಕಡಿಮೆ ಮಾಡಬೇಕು ಮತ್ತು ಪೆಟ್ರೋಲ್ ಮತ್ತು ಡೀಸೆಲ್ ದರ ಏಕರೂಪವಾಗಬೇಕು ಎಂದವರು ಸರ್ಕಾರಕ್ಕೆ ಒತ್ತಾಯಿಸಿದರು.