ಬಿಸಿಯೂಟದಲ್ಲಿ ಸತ್ತ ಹೆಗ್ಗಣ

ಸಾಂದರ್ಭಿಕ ಚಿತ್ರ

ಅಹಮ್ಮದಾಬಾದ್ : ಇಲ್ಲಿನ ಶಾಲೆಯೊಂದರಲ್ಲಿ ಪುಟಾಣಿಗಳಿಗೆ ವಿತರಿಸಲಾದ ಬಿಸಿಯೂಟದಲ್ಲಿ ಸತ್ತ ಹೆಗ್ಗಣವೊಂದು ಪತ್ತೆಯಾಗಿದೆ. ಗಾಂಧಿನಗರ ಜಿಲ್ಲೆಯ ಕಾಲೂಲ್ ತಾಲೂಕಿನ ಜಮ್ಲಾ ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಪುಟಾಣಿಗಳಿಗೆ ಬುಧವಾರ ಬಿಸಿಯೂಟ ವಿತರಿಸಲಾಗಿದ್ದು, ಇನ್ನೇನು ಊಟ ಮಾಡ ಬೇಕೆನ್ನುವಷ್ಟರಲ್ಲಿ ಈ ಸತ್ತ ಹೆಗ್ಗಣ ಪತ್ತೆಯಾಗಿದೆ. ಪ್ರಕರಣವನ್ನು ತನಿಖೆ ನಡೆಸಲು ಸರಕಾರ ಆದೇಶ ಮಾಡಿದೆ.