ಹಾಡಹಗಲೇ ಮನೆಗೆ ನುಗ್ಗಿ ನಗ -ನಗದು ದೋಚಿದರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ 45 ಸಾವಿರ ರೂ ಹಾಗೂ ಎರಡು ಪವನ್ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ.

ಸೋಮವಾರ ಮಧ್ಯಾಹ್ನ ಗೇರುಕಟ್ಟೆ ಬಾಚಲಿಕೆ ರಸ್ತೆ ಸಮೀಪವಾಸಿ ಪರಿಶಿಷ್ಟ ವರ್ಗದ ಮರಿಯಮ್ಮತ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಈಕೆ ಮನೆಗೆ ಬೀಗ ಹಾಕದೆ ಬಾಗಿಲು ಮುಚ್ಚಿ ನೆರೆ ಮನೆಗೆ ತೆರಳಿದ್ದರು. ಮರಳಿ ಮನೆಗೆ ಬರುವಾಗ ಕಳವು ನಡೆದಿರುವುದು ಗಮನಕ್ಕೆ ಬಂದಿದೆ. ಭಿಕ್ಷಾಟನೆಗೆ ಬಂದವರು ಈ ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.