ಮನೆಯಿಂದ ಹಗಲೇ ನಗ-ನಗದು ಕಳವು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಅಂಗಡಿಮೊಗರು ನಾಟೆಕಲ್ಲು ಹೌಸ್ ನಿವಾಸಿ ಜಲಜಾ ಅವರ ಮನೆಯಿಂದ ಹಾಡಹಗಲೇ 7 ಪವನ್ ಚಿನ್ನಾಭರಣ ಮತ್ತು 10 ಸಾವಿರ ರೂ ನಗದು ಕಳವು ಮಾಡಲಾಗಿದೆ.

ಅಂಗಡಿಮೊಗರು ಶಾಲೆಯ ಅಡುಗೆ ಕಾರ್ಮಿಕೆಯಾಗಿರುವ ಜಲಜಾ ಅವರು ಮನೆಗೆ ಬೀಗ ಹಾಕಿ ಶಾಲೆಗೆ ಹೋಗಿದ್ದರು. ಅಪರಾಹ್ನ 2.45ಕ್ಕೆ ಮನೆಗೆ ತಲುಪಿದಾಗ ಮನೆಯಲ್ಲಿ ಕಳವಾಗಿರುವುದು ತಿಳಿದುಬಂತು. ಮನೆಯ ಹಿಂಬದಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಿಂದ ನಗ-ನಗದು ಕಳವು ಮಾಡಿದ್ದಾರೆ. ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿಮಾಡಿದ್ದಾರೆ. ಈ ಸಂದರ್ಭದಲ್ಲಿ ಪತಿ ಕೆಲಸಕ್ಕೂ, ಮಕ್ಕಳು ಶಾಲೆಗೆ ಹೋಗಿದ್ದರು. ಶನಿವಾರ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದರು.