ಗಣಿ ಲಂಚ ಜತೆ ಎನ್ಕೌಂಟರ್ ಮ್ಯಾನ್ ನಾಯಕ್ ಲಿಂಕ್ ?

ಬೆಂಗಳೂರು : ಹಿರಿಯ ಐಎಎಸ್ ಅಧಿಕಾರಿ ಹಾಗೂ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಅವರನ್ನು ವಿಶೇಷ ತನಿಖಾ ತಂಡವು  ಜಂತಕಲ್ ಮೈನಿಂಗ್ ಕಂಪೆನಿಗೆ ಅಕ್ರಮವಾಗಿ ಕಬ್ಬಿಣದ ಅದಿರು ಸಾಗಿಸಲು ಅನುಮತಿ ನೀಡುವ ಸಲುವಾಗಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಬೆನ್ನಲ್ಲೇ ತನಿಖಾ ತಂಡವು ಮುಂಬೈಯ ಎನ್ಕೌಂಟರ್ ಸ್ಪೆಷÀಲಿಸ್ಟ್ ದಯಾ ನಾಯಕ್ ಅವರನ್ನೂ ವಿಚಾರಣೆಗೆ ಕರೆಸುವ ಸೂಚನೆ ಲಭಿಸಿದೆ.

ದಯಾ ನಾಯಕ್ ಅವರು ಬಡೇರಿಯಾ ಅವರ ಮೇಲೆ ಒತ್ತಡ ಹೇರಿ  ಪರವಾನಗಿಗೆ ಸಹಿ ಹಾಕುವಂತೆ ಮಾಡಿದ್ದರು ಎಂದು ಬಡೇರಿಯಾ ಈಗಾಗಲೇ  ಬಹಿರಂಗ ಪಡಿಸಿದ್ದಾರೆನ್ನಲಾಗಿದೆ. ಮೂಲಗಳಿಂದ ತಿಳಿದು ಬಂದಂತೆ ದಯಾ ನಾಯಕ್ ಅವರು ಆಗ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ ಮೂಲಕವೂ ಅಧಿಕಾರಿ ಮೇಲೆ ಒತ್ತಡ ಹೇರಿದ್ದರೆಂದು ಆರೋಪಿಸಲಾಗಿದೆ. ಸಂಬಂಧಿಸಿದ ಕಡತಕ್ಕೆ  ಅಧಿಕಾರಿ ಅನುಮತಿಸಿ ಸಹಿ ಹಾಕಿದ ನಂತರ ಅವರಿಗೂ ಕುಮಾರಸ್ವಾಮಿಗೂ ದಯಾ ನಾಯಕ್ ಅವರು ಮುಂಬೈ ಮೂಲದ ಗಣಿ ಉದ್ಯಮಿ ಜಂತಕಲ್ ಮೈನಿಂಗ್ ಕಂಪೆನಿ ಮಾಲಕ ವಿನಯ್ ಗೋಯಲ್ ಮುಖಾಂತರ  ಮುಂಬೈಯಲ್ಲಿ ರಾಜಾತಿಥ್ಯ ಒದಗಿಸಿದ್ದರು ಎಂದೂ ತಿಳಿದುಬಂದಿದೆ.

ದಯಾ  ನಾಯಕ್ ಅವರು ವಿನಯ್ ಗೋಯೆಲ್ ಅವರೊಂದಿಗೆ ಬಹಳ ಸ್ನೇಹದಿಂದಿದ್ದರು ಎಂದೂ ಹೇಳಲಾಗುತ್ತಿದೆ. ಕುಮಾರಸ್ವಾಮಿ ಹಆಗೂ ದಯಾ ನಾಯಕ್ ಅವರು ತಮ್ಮ ಮೇಲೆ ಹೇರಿದ್ದ ಇನ್ನಿಲ್ಲದ ಒತ್ತಡದ ಫಲವಾಗಿ ತಾನು ಅನಿವಾರ್ಯವಾಗಿ ಜಂತಕಲ್ ಮೈನಿಂಗಿಗೆ ಪರವಾನಗಿ ನೀಡಬೇಕಾಗಿ ಬಂದಿತ್ತೆಂದು ಬಧನದಲ್ಲಿರುವ ಅಧಿಕಾರಿ ಬಹಿರಂಗಪಡಿಸಿದ್ದಾರೆನ್ನಲಾಗಿದೆ.