ಇಂದು ಮಧ್ಯರಾತ್ರಿಯಿಂದಲೇ `ಚಕ್ರವರ್ತಿ’ ಅಬ್ಬರ ಶುರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಚಕ್ರವರ್ತಿ’ ಚಿತ್ರ ನಾಳೆ ರಿಲೀಸ್ ಆಗುತ್ತಿದೆ. ವಿಶೇಷವೆಂದರೆ ಸಿನಿಮಾದ ಮೊದಲ ಶೋ ಶುರುವಾಗುವುದು ಇಂದು ಮಧ್ಯರಾತ್ರಿ 12 ಗಂಟೆಗೆ. ಮೂರು ವಿಭಿನ್ನ ಶೇಡ್, ಡೈಲಾಗ್ ಇಲ್ಲದ ಟ್ರೈಲರ್, ಅಂಡರ್ ವರ್ಲ್ಡ್ ಕಥೆ ಹೀಗೆ ಪ್ರತಿಯೊಂದು ವಿಷಯದಲ್ಲೂ ದರ್ಶನ್ ಅಭಿಮಾನಿಗಳಲ್ಲಿ `ಚಕ್ರವರ್ತಿ’ ಕುತೂಹಲ ಹೆಚ್ಚಿಸಿದ್ದಾನೆ. `ಚಕ್ರವರ್ತಿ’ ಸಿನಿಮಾ ಭೂಗತ ಲೋಕದ ಕಥೆಯಾಗಿದ್ದು ಅದರಲ್ಲೂ ಒಂದು ಪ್ರೇಮಕಥೆಯಿದೆ. ಈ ಸಿನಿಮಾ 80ರ ದಶಕದಿಂದ ಶುರುವಾಗಿ ಇಲ್ಲಿಯವರೆಗೂ ಇದೆಯಂತೆ. ಸಿನಿಮಾದಲ್ಲಿ ದೀಪಾ ಸನ್ನಿಧಿ ದರ್ಶನಗೆ ಸಾಥ್ ನೀಡಿದ್ದು ಇದು ಅವರಿಬ್ಬರ ಕಾಂಬಿನೇಶನ್ನಿನಲ್ಲಿ ಬರುವ ಎರಡನೇ ಸಿನಿಮಾ. ದರ್ಶನ್ ಸಹೋದರ