ಬರಲಿದೆ ಬಹುತಾರಾಗಣ ಚಿತ್ರ `ಕುರುಕ್ಷೇತ್ರ’

ಸ್ಯಾಂಡಲ್ವುಡ್ಡಿನಲ್ಲಿ ಬಿಗ್ ಬಜೆಟ್ ಚಿತ್ರವೊಂದು ಸೆಟ್ಟೇರಲು ಸಿದ್ಧವಾಗಿದೆ. ಐತಿಹಾಸಿಕ ಚಿತ್ರ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ ನಿರ್ದೇಶಿಸಿದ್ದ ನಾಗಣ್ಣ ಸಾರಥ್ಯದಲ್ಲಿ `ಕುರುಕ್ಷೇತ್ರ’ ಸಿನಿಮಾ ಮೂಡಿಬರಲಿದೆ. ಚಿತ್ರದಲ್ಲಿ ದರ್ಶನ್ ದುರ್ಯೋಧನನಾಗಿ ಅಟ್ಟಹಾಸಗೈಯಲಿದ್ದಾನೆ. ಇದು ದರ್ಶನ್ 50ನೇ ಸಿನಿಮಾವಾಗಲಿದ್ದು, ಇಷ್ಟರವರೆಗೆ ದರ್ಶನ್ 50ನೇ ಸಿನಿಮಾ ಯಾವುದು ಎನ್ನುವ ಊಹಾಪೋಹಕ್ಕೆ ಕೊನೆಗೂ ತೆರೆಬಿದ್ದಿದೆ.
ಸಹಜವಾಗಿಯೇ ಇದೊಂದು ಬಹುತಾರಾಗಣ ಚಿತ್ರವಾಗಲಿದೆ. ಈ ಸಿನಿಮಾದಲ್ಲಿ ಭೀಷ್ಮಾಚಾರ್ಯರ ಪಾತ್ರದಲ್ಲಿ ಅಂಬರೀಷ್ ನಟಿಸುವುದು ಫೈನಲೈಸ್ ಆಗಿದೆಯಂತೆ. ಅಂತೆಯೇ ಧರ್ಮರಾಯನ ಪಾತ್ರದಲ್ಲಿ ರವಿಚಂದ್ರನ್ ನಟಿಸುತ್ತಾರೆ ಎನ್ನಲಾಗಿದೆ. ಬೇರೆ ಭಾಷೆಗಳ ಸ್ಟಾರ್ ನಟರೂ ಈ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಚಿತ್ರದ ಸ್ಕ್ರಿಪ್ಟ್ ಈಗ ರೆಡಿಯಾಗುತ್ತಿದ್ದು ಜತೆಗೇ ಪ್ರಿ-ಪ್ರೊಡಕ್ಷನ್ ವರ್ಕ್ ಭರದಿಂದ ಸಾಗುತ್ತಿದೆ. ತೆಲುಗು ಸಿನಿಮಾಟೋಗ್ರಾಫರ್ ಶ್ಯಾಮ್ ಕೆ ನಾಯ್ಡು ಮೊದಲ ಬಾರಿಗೆ ಕನ್ನಡ ಸಿನಿಮಾಗಾಗಿ ಈ ಚಿತ್ರದ ಮೂಲಕ ಕೆಮರಾ ಹಿಡಿಯಲಿದ್ದಾರೆ. ಜುಲೈ ಕೊನೆಯಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ.