ಮತ್ತೆ ಜೊತೆಯಾಗಲಿರುವ ದರ್ಶನ್, ರಚಿತಾ

ಸ್ಯಾಂಡಲ್ವುಡ್ಡಿನಲ್ಲಿ ಕೆಲವು ಫೇವರಿಟ್ ಜೋಡಿಗಳಿದ್ದಾರೆ. ಅವರಲ್ಲಿ `ಬುಲ್ ಬುಲ್’, `ಅಂಬರೀಶ’, `ಜಗ್ಗುದಾದ’ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದ ದರ್ಶನ್ ಹಾಗೂ ರಚಿತಾ ರಾಮ್ ಕೂಡಾ ಒಂದು. ಈಗ ಈ ಜೋಡಿ ಮತ್ತೆ ತೆರೆಮೇಲೆ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ಗಾಂಧೀನಗರದಿಂದ ಬಂದಿದೆ.

ದರ್ಶನ್ ಹಾಗೂ ರಚಿತಾ ಅಭಿನಯದ ಎರಡು ಸಿನಿಮಾಗಳು ಈಗಾಗಲೇ ಬಾಕ್ಸ್ ಆಫೀಸಿನಲ್ಲಿ ಧೂಮ್ ಮಚಾಯಿಸಿದ್ದು ಈಗ ಅದೇ ಜೋಡಿ ಮತ್ತೆ ಪ್ರೇಕ್ಷಕರನ್ನು ಮೋಡಿ ಮಾಡಲು ಸಜ್ಜಾಗಿದೆಯಂತೆ.

ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ ಎನ್ನಲಾಗಿದೆ. ಈ ಸಿನಿಮಾವನ್ನು ಪಿ ಕುಮಾರ್ ನಿರ್ದೇಶನ ಮಾಡಲಿದ್ದು ಇದೊಂದು ಪಕ್ಕಾ ಕಮರ್ಶಿಯಲ್ ಸಬ್ಜೆಕ್ಟ್ ಹೊಂದಿದೆ. ಸದ್ಯ ದರ್ಶನ್ `ಕುರುಕ್ಷೇತ್ರ’ ಚಿತ್ರದಲ್ಲಿ ಬ್ಯೂಸಿಯಾಗಿದ್ದು ಇದಾದ ಬಳಿಕ ಹೊಸ ಚಿತ್ರದ ಶೂಟಿಂಗ್ ಶುರುವಾಗುವ ನಿರೀಕ್ಷೆ ಇದೆ.