ಕಾರು ಗುದ್ದಿ ದಾರಿಮಿ ಕಾಲಿಗೆ ಗಂಭೀರ ಗಾಯ

ವಿಟ್ಲ : ವೀರಕಂಭ ಸಮೀಪ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಕುಕ್ಕಿಲ ದಾರಿಮಿ ಗಂಭೀರ ಗಾಯಗೊಂಡಿದ್ದಾರೆ.

ಸಮಸ್ತ ಕೇರಳ ಜಂಇಯ್ಯತುಲ್ ನೇತಾರರಾಗಿರುವ ಕೋಡಪದವು ಸಮೀಪದ ಕುಕ್ಕಿಲ ನಿವಾಸಿ ಅಬ್ದುಲ್ ಖಾದರ್ ದಾರಿಮಿ (42) ಗಾಯಗೊಂಡ ಬೈಕ್ ಸವಾರ. ವಿಟ್ಲದಿಂದ ಕಲ್ಲಡ್ಕದ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದ ದಾರಿಮಿಗೆ ಎದುರಿನಿಂದ ಬರುತ್ತಿದ್ದ ಕಾರು ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ದಾರಿಮಿ ಕಾಲಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣವೇ ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.