ಭಾರತದಲ್ಲಿ ಸಿಗಡಿ ಪೋಷಣೆ ಅವಶ್ಯ : ತಜ್ಞರ ಅಭಿಪ್ರಾಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸಿಗಡಿ ಉತ್ಪಾದನೆಯಲ್ಲಿ ಭಾರತವು 2ನೇ ಸ್ಥಾನ ಹೊಂದಿದೆ. ಚೀನಾ ದೇಶವು ಪ್ರಥಮ ಸ್ಥಾನದಲ್ಲಿದೆ. ಹಾಗಾಗಿ ಇತರ ಆಗ್ನೇಯ ಏಷ್ಯಾ ದೇಶಗಳು 5 ವರ್ಷದ ಹಿಂದೆ ಮೇಲಿನ ಸ್ಥರದಲ್ಲಿದ್ದಾಗ ಮಾಡಿದ ತಪ್ಪುಗಳನ್ನು ಕಂಡುಹಿಡಿಯಲು ಇದು ಸಕಾಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ನೆಹರೂ ಮೈದಾನದಲ್ಲಿ ಮೇ 14ರಿಂದ 17ರವರೆಗೆ ನಡೆದ `ಅಕ್ವಾ ಅಕ್ವೇರಿಯಾ ಇಂಡಿಯಾ 2017′ ಏಷ್ಯಾದ ಬೃಹತ್ ಸಾಗರ ಮೀನು ಪ್ರದರ್ಶನದಲ್ಲಿ ಈ ಅಭಿಪ್ರಾಯಗಳು ವ್ಯಕ್ತವಾದವು. ಸಿಗಡಿಗಳಿಗೆ ಬಾಧಿಸುವ ರೋಗಗಳು ಮತ್ತು ಮಾರುಕಟ್ಟೆ ದರ ಅಸಮತೋಲನ ಸಿಗಡಿ ಕೃಷಿಗೆ ಎದುರಾಗಿರುವ ಮುಖ್ಯ ಸಮಸ್ಯೆಗಳು ಎಂಬುದು ತಜ್ಞರ ನಿಲುವಾಗಿದ್ದು, ಸಿಗಡಿಯಲ್ಲಿ ರೋಗಗಳು ಕಾಣಿಸಿಕೊಂಡಾಗ ಒಳಾಂಗಣದಲ್ಲಿ ಅಕ್ವಾಕಲ್ಚರಗೆ ಮುಂದಾಗಬೇಕು ಎಂಬುದು ತಜ್ಞರ ಸಲಹೆಯಾಗಿದೆ.

“ಸಾಗರ ಬಿಸಿಯಾಗುತ್ತಿದ್ದು, ಇದರಿಂದ ಬ್ಯಾಕ್ಟೀರಿಯಾ ಸೋಂಕು ಹೆಚ್ಚಾಗುತ್ತಿದೆ. ಪ್ರಸಕ್ತ ವೈರಸ್ ಜೊತೆಗೆ ಬ್ಯಾಕ್ಟೀರಿಯಾ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಥೈಲ್ಯಾಂಡ್ ಮೂಲದ ಸಂಶೋಧಕ, 3 ದಶಕಗಳಿಂದ ಕ್ಷೇತ್ರದಲ್ಲಿರುವ ರಾಬಿನ್ಸ್ ಮ್ಯಾಂಕ್ತೋಷ್ ಹೇಳಿದ್ದಾರೆ.

“ಸಿಗಡಿ ಪೋಷಣೆ ರೋಗಕಾರಕಗಳನ್ನು ಕಡಿಮೆಗೊಳಿಸುತ್ತದೆ ಮತ್ತು ಹೆಚ್ಚು ಟಾಕ್ಸಿನ್ ಪ್ರತಿರೋಧಗಳನ್ನು ಹೊಂದಿವೆ. ಥೈಲ್ಯಾಂಡ್ ಮತ್ತು ಮೆಕ್ಸಿಕೋ ನರ್ಸರಿ ಫಾರ್ಮಿಂಗ್ ಅನುಕೂಲತೆಗಳನ್ನು ಕಂಡುಕೊಂಡಿವೆ. ಭಾರತ ಕೂಡ ಅದೇ ರೀತಿ ಮಾಡಬೇಕು’ ಎಂದು ಇಂಡಿಯಾ ಮತ್ತು ಸೌತ್ ಏಷ್ಯಾ ಐಎನ್ವಿಇ ಅಕ್ವಾಕಲ್ಚರ್ ಏರಿಯಾ ಮ್ಯಾನೇಜರ್ ಎಸ್ ಚಂದ್ರಶೇಖರ್ ಹೇಳಿದ್ದಾರೆ.