ನೇತ್ರಾವತಿ ಸೇತುವೆ ಬುಡದಲ್ಲೇ ಮರಳುಗಾರಿಕೆ ಆತಂಕಕಾರಿ

ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಗೆ ನಬಾರ್ಡ್ ಯೋಜನೆಯಿಂದ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿರುವ ತಡೆಗೋಡೆಯ ಕಾಮಗಾರಿಗೆ ಗುತ್ತಿಗೆದಾರರು ಸರ್ಕಾರಿ ನಿಯಮಾವಳಿಯನ್ನು ಉಲ್ಲಂಘಿಸಿ ಸೇತುವೆಯ ಬುಡದಲ್ಲೇ ಅಕ್ರಮವಾಗಿ ಮರಳು ತೆಗೆಯುತ್ತಿರುವುದು ಕಂಡುಬಂದಿದೆ  ಪ್ರಸಕ್ತ ಮರಳಿನ ದರವನ್ನಾಧರಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ತಡೆಗೋಡೆ ನಿರ್ಮಾಣದ ಗುತ್ತಿಗೆಯನ್ನು ವಹಿಸಿಕೊಂಡಿರುವ ಗುತ್ತಿಗೆದಾರರು ನದಿಯ ಒಡಲಿನಿಂದಲೇ ಉಚಿತವಾಗಿ ಮರಳು ತೆಗೆದು ಕಾಮಗಾರಿಗೆ ಬಳಸುತ್ತಿದ್ದಾರೆ  ಈ ಬಗ್ಗೆ ಸ್ಥಳೀಯ ಪಂಚಾಯತ್ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಿಂದ ಮರಳು ಸಂಗ್ರಹಕ್ಕೆ ಅನುಮತಿ ಪಡೆದುಕೊಂಡಂತೆ ಕಾಣುತ್ತಿಲ್ಲ  ನದಿಗೆ ಕಟ್ಟಲಾದ ಸೇತುವೆಯ ರಕ್ಷಣೆಗಾಗಿ ಸರಕಾರ ಸೇತುವೆಯ ಒಂದು ಕಿ ಮೀ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ನಿಷೇಧಿಸಿದೆ  ಸೇತುವೆಯ ಬಳಿ ಮರಳುಗಾರಿಕೆ ಮಾಡಿದರೆ ಸೇತುವೆ ತಳಪಾಯ ಶಿಥಿಲವಾಗಿ ಅಪಾಯ ಸಂಭವಿಸಬಹುದು  ಆದರೆ ಉಪ್ಪಿನಂಗಡಿಯ ಹೃದಯ ಭಾಗದಲ್ಲಿ ನೇತ್ರಾವತಿ ನದಿ ಸೇತುವೆಯ ಬುಡದಲ್ಲೇ ಯಾವ ನಿಯಮವನ್ನೂ ಲೆಕ್ಕಿಸದೆ ಮರಳುಗಾರಿಕೆ ನಡೆಸುತ್ತಿರುವುದು ಕಳವಳಕಾರಿಯಾಗಿದೆ

ಉಲುಕ್  ಉಪ್ಪಿನಂಗಡಿ