ಉಡುಪಿ ರಸ್ತೆಯಲ್ಲಿ ಅಪಾಯಕಾರಿ ರಂದ್ರ, ಮಾಡ ಬೇಕಾಗಿದೆ ಮುಚ್ಚಳ ಹಾಕಿ ಭದ್ರ

ಉಡುಪಿಯ ಕವಿ ಮುದ್ದಣ ಮಾರ್ಗದ ಅಲಂಕಾರ್ ಚಿತ್ರಮಂದಿರದ ಮುಂಭಾಗದ ರಸ್ತೆಯಲ್ಲಿ ಕುಡಿಯುವ ನೀರು ಸರಬರಾಜು ನಿಯಂತ್ರಿಸುವ ನಿಯಂತ್ರಣ ಚೇಂಬರು ಇದೆ. ಅದರ ಮೇಲೊಂದು ಕಾಲು ಒಳ ಹೋಗುವಷ್ಟು ತೂತು ಇದ್ದು ಇದರ ಮೇಲೆ ಪಾದಚಾರಿಗಳು ನಡೆದು ಕೊಂಡುಹೋಗುವಾಗ ಅಪಾಯ ಖಚಿತ. ತೂತಿನೊಳಗೆ ಕಾಲು ಹೋಗಿ, ಬಿದ್ದು ಅದೇಷ್ಟೋ ಜನ ಇಲ್ಲಿ ಗಾಯ ಮಾಡಿಕೊಂಡಿದ್ದಾರೆ. ರಾತ್ರಿಯ ಸಮಯದಲ್ಲಿ ಈ ಅಪಾಯಕಾರಿ ತೂತು ಗೋಚರಕ್ಕೆ ಬರುವುದಿಲ್ಲ.
ಸಾರ್ವಜನಿಕರಿಗೆ ಅಪಾಯಕಾರಿಯಾಗಿರುವ ನೀರು ಸರಬರಾಜು ಚೇಂಬರಿನ ರಂಧ್ರಕ್ಕೆ ಮುಚ್ಚಳ ಅಳವಡಿಸುವ ವ್ಯವಸ್ಥೆ ತರ್ತಾಗಿ ಮಾಡಬೇಕಾಗಿದೆ. ಮುಂದಾಗುವ ಅನಾಹುತಗಳನ್ನು ತಪ್ಪಿಸಿ.

  • ತಾರಾನಾಥ್ ಮೇಸ್ತ, ಉಡುಪಿ