ದಲಿತರ ಪ್ರಾಯಶ್ಚಿತ್ತದ ಹಬ್ಬ ; ನಾಚಿಕೆಗೇಡಿನ ಸಂಪ್ರದಾಯ

ಹರಿಹರಪುರದ ಉಡಲಸಮ್ಮ ದೇವಸ್ಥಾನದ ಸನ್ನಿಧಿಯಲ್ಲಿ ಪ್ರತಿವರ್ಷ ನಡೆಯುವ ಉಡಸಲಮ್ಮನ ಜಾತ್ರೆ ಇತಿಹಾಸ ಪ್ರಸಿದ್ಧವಾದದ್ದು. ಈ ಆಚರಣೆಗಳಲ್ಲಿ ಬಹುತೇಕ ದಲಿತರು ಸ್ವಇಚ್ಚೆಯಿಂದ ಪಾಲ್ಗೊಳ್ಳುತ್ತಾರೆ. ಆದರೆ ಈ ಆಚರಣೆಗಳ ಹಿಂದೆ ಅನಿಷ್ಟ ಜಾತೀಯತೆ ಇರುವುದನ್ನು ವಿರೋಧಿಸುವ ಪ್ರಗತಿಪರ ದಲಿತ ಯುವಕರು ಜಾತ್ರೆಯ ವಿರುದ್ಧ ದನಿ ಎತ್ತಿದ್ದಾರೆ. ಇಲ್ಲಿನ ಪದ್ಧತಿಯ ಪ್ರಕಾರ ಒಂದು ಮರವನ್ನು ಮರದ ರಾಟೆಯ ಮೇಲೆ ಇರಿಸಲಾಗುತ್ತದೆ. ಈ ಮರದ ಕೆಳಗೆ ಸ್ಥಳೀಯ ಚಾಕೇನಹಳ್ಳಿಯ ನಾಲ್ಕು ದಲಿತ ಕುಟುಂಬಗಳಿಂದ ಎಂಟು ಮಹಿಳೆಯರು ದೇವಾಲಯದ ಕಡೆ ಮುಖ ಮಾಡಿ ಕುಳಿತಿರುತ್ತಾರೆ. ಬಾಯಿಗೆ ಬೀಗ ಎಂಬ ಕ್ರೂರ ಆಚರಣೆಯಡಿ ಇವರ ಬಾಯಿಗೆ ಲೋಹದ ಸೂಜಿಯನ್ನು ಹಾಕಿ ಮುಚ್ಚಲಾಗಿರುತ್ತದೆ. ಮಧ್ಯಾಹ್ಮ 2 ಗಂಟೆಯ ವೇಳೆಗೆ ವಕ್ಕಲಿಗ ಯುವಕರು, ಗೌಡ್ರು ಬಾಯ್ಸ್ ಎಂಬ ಹೆಸರುಹೊತ್ತ ಜೆರ್ಸಿ ಷರ್ಟ್‍ಗಳನ್ನು ಧರಿಸಿಕೊಂಡು ರಥಗಳನ್ನು ಎಳೆದುತರುತ್ತಾರೆ. ದೇವಾಲಯದ ಮುಂಭಾಗದಲ್ಲಿ ಮೂವರು ದಲಿತರು ಕಟ್ಟಿಗೆ ಮತ್ತು ಇದ್ದಿಲಿನಿಂದ ಬೆಂಕಿಯ ಕುಂಡ ಸಿದ್ಧಪಡಿಸಿರುತ್ತಾರೆ. ತಮ್ಮ ಪರಿಶುದ್ಧತೆಯನ್ನು ನಿರೂಪಿಸುವ ನಂಬಿಕೆಯಿಂದ ಒಬ್ಬೊಬ್ಬರೂ ಬೆಂಕಿಯ ಕುಂಡದ ಮೇಲೆ ನಡೆದು ಹೋಗುತ್ತಾರೆ. ಒಂದು ವೇಳೆ ಬೆಂಕಿಯಲ್ಲಿ ಬಿದ್ದರೆ ಅವರು ಅಥವಾ ಅವರ ಪೂರ್ವಿಕರು ಮಾಡಿದ ಅಪರಾಧಗಳಿಗೆ ಶಿಕ್ಷೆ ಎಂದು ಅರ್ಥೈಸಲಾಗುತ್ತದೆ.

ರಥಗಳು ನಿರ್ಗಮಿಸಿದ ನಂತರ ಸಿಡಿ ಆಚರಣೆಗಾಗಿ ಜನ ಸುತ್ತಲೂ ನೆರೆಯುತ್ತಾರೆ. ಈ ಆಚರಣೆಯಲ್ಲಿ ನಾಲ್ವರು ದಲಿತರು ಒಬ್ಬೊಬ್ಬರಾಗಿ ತಮ್ಮ ಬೆನ್ನಿಗೆ ಕಬ್ಬಿಣದ ಕೊಂಡಿಯೊಂದನ್ನು ಸಿಕ್ಕಿಸಿಕೊಂಡು ಮರದ ಕೊಂಬೆಗೆ ನೇತುಹಾಕಿಕೊಳ್ಳುತ್ತಾರೆ.  ನಂತರ ರಾಟೆಯ ಮೇಲಿರುವ ಮರವನ್ನು ತಿರುಗಿಸಲಾಗುತ್ತದೆ. ದಲಿತರ ಪೂರ್ವಿಕರು ಯಾವುದೋ ಕಾಲದಲ್ಲಿ ಉಡಲಸಮ್ಮನ ಗದ್ದೆಯಿಂದ ಭತ್ತ ಕಳ್ಳತನ ಮಾಡಿದ್ದರೆಂದೂ, ಆ ತಪ್ಪಿಗೆ ಇದು ಪ್ರಾಯಶ್ಚಿತ್ತ ಎಂದೂ ನಂಬಲಾಗುತ್ತದೆ.

ಆದರೆ ಎಷ್ಟು ವರ್ಷಗಳಿಂದ ಈ ಪ್ರಾಯಶ್ಚಿತ್ತದ ಪ್ರಹಸನ ನಡೆಯುತ್ತಿದೆ, ಇನ್ನೂ ಎಷ್ಟು ವರ್ಷ ದಲಿತರು ಪ್ರಾಯಶ್ಚಿತ್ತ ಪಡೆಯಬೇಕು ಎಂದು ಯಾರೂ ಹೇಳುವುದಿಲ್ಲ. ಕಳೆದ ಐವತ್ತು ವರ್ಷಗಳಿಂದ ಸಿಡಿ ಹಬ್ಬವನ್ನು ಸತತವಾಗಿ ಆಚರಿಸಲಾಗುತ್ತಿದೆ ಎನ್ನುತ್ತಾರೆ ಹಿರಿಯ ನಾಗರಿಕ ಸಿದ್ದಪ್ಪ ಗೌಡ.

“ಈ ಕ್ರೂರ ಆಚರಣೆಯನ್ನು ನಿಲ್ಲಿಸುವಂತೆ ಕೆಲವು ದಲಿತ ಗುಂಪುಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದವು” ಎನ್ನುತ್ತಾರೆ ಸಿಗರ್‍ನಹಳ್ಳಿಯ ರಾಜು ಸಿಗರ್ನಹಳ್ಳಿ. ದಲಿತರೂ ಸಹ ಈ ಆಚರಣೆಯಲ್ಲಿ ಭಾಗವಹಿಸದಂತೆ ತೀರ್ಮಾನಿಸಿದ್ದರು ಎನ್ನುತ್ತಾರೆ ರಾಜು. ಆದರೆ ಹಬ್ಬದ ಕೆಲವೇ ದಿನಗಳ ಮುನ್ನ ದಲಿತರೇ ಸಹಿ ಮಾಡಿದ ಪತ್ರವೊಂದನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು ತಾವು ಹಬ್ಬದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹಲವಾರು ದಲಿತರು ಸಹಿ ಮಾಡಿರುವುದು ಬೆಳಕಿಗೆ ಬಂದಿದೆ.  ಈ ಬದಲಾದ ನಿರ್ಧಾರಕ್ಕೆ ಕಾರಣ ಏನೆಂದು ತಿಳಿದಿಲ್ಲ ಎಂದು ರಾಜು ಅಚ್ಚರಿ ವ್ಯಕ್ತಪಡಿಸುತ್ತಾರೆ. ಬಹುಶಃ ವಕ್ಕಲಿಗ ಸಮುದಾಯದ ಪ್ರಬಲ ನಾಯಕರ ಒತ್ತಡವೇ ಬದಲಾದ ನಿರ್ಧಾರಕ್ಕೆ ಕಾರಣ ಎಂದು ದಲಿತ ಯುವಕರು ಆರೋಪಿಸುತ್ತಾರೆ.

ಹಾಸನ ಜಿಲ್ಲೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಸ್ವಕ್ಷೇತ್ರವಾಗಿದ್ದು ಇಲ್ಲಿ ವಕ್ಕಲಿಗರ ರಾಜಕೀಯ ಪ್ರಾಬಲ್ಯ ತುಸು ಹೆಚ್ಚಾಗಿಯೇ ಇದೆ.  ಈ ಒಪ್ಪಿಗೆ ಪತ್ರ ಸಲ್ಲಿಕೆಯಾದ ಕೂಡಲೇ ಜಿಲ್ಲಾಡಳಿತ ತನಿಖೆ ನಡೆಸಬೇಕಿತ್ತು, ಸಿಡಿ ಹಬ್ಬಕ್ಕೆ ಅವಕಾಶ ನೀಡಬಾರದಿತ್ತು ಎನ್ನುತ್ತಾರೆ ವಕೀಲ ಕ್ಲಿಫ್ಟನ್ ರೊಸಾರಿಯೋ. ಆದರೆ ಪಾರಂಪರಿಕವಾಗಿ ತಮ್ಮ ತಂದೆ ಬಿಟ್ಟುಹೋದ ಪರಂಪರೆಯನ್ನು ಆಚರಿಸುತ್ತಾ ಬಂದಿರುವ ಮಹ ದೇವಪ್ಪ ಸಿಡಿ ಹಬ್ಬದಲ್ಲಿ ಭಾಗವಹಿಸಿದ್ದು ಇದು ತಮಗೆ ಅನಿವಾರ್ಯ ಎನ್ನುತ್ತಾರೆ. (ಕೃಪೆ: ಹಿಂದುಸ್ಥಾನ ಟೈಂಸ್)

LEAVE A REPLY