ದಲಿತ ಮಹಿಳೆ ಸುಟ್ಟು ಕೊಲೆ

ಸಾಂದರ್ಭಿಕ ಚಿತ್ರ

ಮುಜಫರಪುರ : ಮಧ್ಯ ಮಯಸ್ಸಿನ ದಲಿತ ಮಹಿಳೆಯೊಬ್ಬಳಿಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ ಕೊಲೆಗೈದ ಘಟನೆ ಬಿಹಾರದ ಮುಜಫರಪುರ ಜಿಲ್ಲೆಯ ತರ್ಮದಲ್ಲಿ ನಡೆದಿದೆ.
ರಾಜಕಲಿ ದೇವಿಯನ್ನು (45) ಕಳೆದ ರಾತ್ರಿ ಸುಟ್ಟು ಕೊಲೆಗೈಯಲಾಗಿದೆ. ಇದು ಪರಿಚಯದ ಬಿಂದೇಶ್ವರ ಚೌಧರಿಯ ದುಷ್ಕøತ್ಯವಾಗಿದೆ ಎಂದು ಆರೋಪಿಸಿಲಾಗಿದೆ.
ಮರಣೋತ್ತರ ಪರೀಕ್ಷೆ ಬಳಿಕ ವಿಸ್ತøತ ತನಿಖೆ ನಡೆಸಿದ ಪೊಲೀಸರು, ಮಾಜಿ ಜಿಲ್ಲಾ ಮಂಡಳಿ ಸದಸ್ಯನೂ ಆಗಿರುವ, ಪ್ರೇಂ ಚೌಧರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈಕೆ ರಾತ್ರಿ ಊಟ ಮುಗಿಸಿ ತನ್ನ ಮನೆಯಲ್ಲಿ ಮಲಗಿದ್ದ ವೇಳೆ ಪ್ರೇಂ ಚೌಧರಿ, ಕೈಕಾಲು ಕಟ್ಟಿ ಬೆಂಕಿ ಕೊಟ್ಟು ಕೊಲೆಗೈದಿದ್ದಾನೆಂದು ಮಹಿಳೆಯ ಪುತ್ರ ಅಶೋಕ್ ಚೌಧರಿ ಆರೋಪಿಸಿ ಪೊಲೀಸ್ ದೂರು ನೀಡಿದ್ದರು.