ಸರ್ಕಾರಿ ಆಸ್ಪತ್ರೆ ಟಾಯ್ಲೆಟ್ಟಿನಲ್ಲಿ ಜನ್ಮ ನೀಡಿದ ದಲಿತ ಮಹಿಳೆ

ಮಂಜೇರಿ : ಕೇರಳದ ಮಂಜೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಟಾಯ್ಲೆಟ್ಟಿನೊಳಗೆ ದಲಿತ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ ಸುದ್ದಿ ಭಾರೀ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ, ಘಟನೆಯ ಸಮಗ್ರ ವರದಿ ನೀಡುವಂತೆ ಕೇರಳ ಆರೋಗ್ಯ ಸಚಿವರು ನಿನ್ನೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಿಳೆಯ ಪ್ರಸವ ದಿನಾಂಕ ಜ 13 ಆಗಿತ್ತು. ಆದರೆ ಮೊನ್ನೆ ಆಕೆ ಅಸ್ವಸ್ಥಗೊಂಡ ಕಾರಣ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ಆಕೆಯ ಪರೀಕ್ಷೆ ನಡೆಸಿದ್ದರು. ಆಸ್ಪತ್ರೆಗೆ ದಾಖಲಾಗಿದ್ದಾಗ ಆಕೆಗೆ ಹೆರಿಗೆ ನೋವು ಕಾಣಿಸಿರಲಿಲ್ಲ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ಆಸ್ಪತ್ರೆಯ ದಿವ್ಯ ನಿರ್ಲಕ್ಷ್ಯದಿಂದ ಮಹಿಳೆ ಟಾಯ್ಲೆಟ್ಟಿನಲ್ಲಿ ಮಗುವಿಗೆ ಜ್ನಮ ನೀಡುವಂತಾಗಿದೆ ಎಂದು ಆಕೆಯ ಸಂಬಂಧಿಕರು ಆರೋಪಿಸಿ ಸೀಎಂ ಪಿಣರಾಯಿ ಮತ್ತು ಆರೋಗ್ಯ ಸಚಿವ ಶೈಲಜಾಗೆ ದೂರು ನೀಡಿದ್ದರು.

ವರದಿಯಲ್ಲಿ ವೈದ್ಯರ ದೋಷ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ಭರವಸೆ ನೀಡಿದರು.