ನಿತ್ಯ ತೈಲ ಬೆಲೆ ಪರಿಷ್ಕರಣೆ ಸರಿಯೇ

ತೈಲ ಕಂಪನಿಗಳು ಇದೇ 16ರಿಂದ ತೈಲ ಬೆಲೆಗಳನ್ನು ಪ್ರತಿನಿತ್ಯ ಪರಿಷ್ಕರಣೆ ಮಾಡಲು ನಿರ್ಧರಿಸಿರುವುದು ಸರಿಯಾದ ಕ್ರಮವಲ್ಲ.
ಈಗಾಗಲೇ ತೈಲ ಬೆಲೆ ಪರಿಷ್ಕರಣ ನಿರ್ಧಾರವನ್ನು ಸರಕಾರ ತೈಲ ಕಂಪೆನಿಗಳಿಗೆ ಹಸ್ತಾಂತರಿಸಿದ ಪರಿಣಾಮವಾಗಿ ಸರಕುಗಳ ಬೆಲೆಗಳು ನಿಯಂತ್ರಣ ಮೀರಿ ಏರಿಕೆ ಕಂಡಿವೆ. ವಾಹನಗಳ ಬಾಡಿಗೆ ಬಸ್ ದರಗಳು ಆಕಾಶದೆತ್ತರಕ್ಕೇರಿವೆ ಈಗ ನಿತ್ಯ ಪರಿಷ್ಕರಣೆ ಮಾಡುವುದರಿಂದ ವಸ್ತುಗಳ ಬೆಲೆಯೂ ಏರುಪೇರಾಗುವ ಸಾಧ್ಯತೆ ಇದೆ ಎಲ್ಲವನ್ನೂ ವಿದೇಶಿ ದೃಷ್ಟಿಯಿಂದಲೇ ನೋಡದೆ ಇಲ್ಲಿನ ವಾಸ್ತವ ಪರಿಸ್ಥಿತಿಗಳನುಗುಣವಾಗಿ ನಿರ್ಧಾರ ಕೈಗೊಳ್ಳುವ ನಡೆ ಅನುಸರಿಸದಿರುವುದು ಖಂಡನೀಯ. ಆರುವತ್ತು ವರ್ಷಗಳ ಆಳ್ವಿಕೆಯಲ್ಲಿ ಕಾಂಗ್ರೆಸ್ ಮಾಡದ್ದನ್ನು 60 ತಿಂಗಳಲ್ಲಿ ಮಾಡಿ ತೋರಿಸುತ್ತೇವೆ ಎಂದವರ ಸಾಧನೆಯಲ್ಲಿ ಬಹುಶಃ ಈ ನಿರ್ಧಾರವೂ ಸೇರಿದೆಯೇ

  • ಪ್ರಥಮ ಶೆಟ್ಟಿ  ಪಚ್ಚನಾಡಿ ಮಂಗಳೂರು