ಬೈಕಂಪಾಡಿ ಕಾರ್ಮಿಕರನ್ನು ದೋಚುತ್ತಿದ್ದವರು ಪರಾರಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪಣಂಬೂರು ಠಾಣಾ ವ್ಯಾಪ್ತಿಯ ಬೈಕಂಪಾಡಿ-ಅಂಗರಗುಂಡಿ ಮಧ್ಯೆ ರೈಲ್ವೇ ಟ್ರಾಕಿನಲ್ಲಿ ಸಂಚರಿಸುತ್ತಿದ್ದ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರನ್ನು ಕಳೆದ ಹಲವು ತಿಂಗಳಿನಿಂದ ದೋಚಿ ಪರಾರಿಯಾಗುತ್ತಿದ್ದ ದರೋಡೆಕೋರರು ಶನಿವಾರದಂದು ಲೂಟಿ ಮಾಡಲು ಮುಂದಾಗುತ್ತಿದ್ದಂತೆ  ಸ್ಥಳೀಯರ ದಾಳಿ ಎದುರಿಸಲಾಗದೇ ಪರಾರಿಯಾಗಿದ್ದಾರೆ.

bike-1

ಕೊಂಡು ಹೋಗುತ್ತಿದ್ದ ಹಲವು ಮಂದಿ ಬಡ ಕೂಲಿ ಕಾರ್ಮಿಕರು ಇವರ ದಾಳಿಗೆ ಸಿಲುಕಿ ನಗದು ಹಣವನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಶನಿವಾರ ಮಾತ್ರ ಇವರನ್ನು ಎದುರಿಸಲು ತಂಡವೊಂದು ಕಾದು ಕುಳಿತ್ತಿತ್ತು ಎನ್ನಲಾಗಿದೆ. ಶನಿವಾರ ದರೋಡೆಕೋರರು ಆಗಮಿಸುತ್ತಿದ್ದಂತೆ ತಂಡ ದಾಳಿ ನಡೆಸಿದ್ದು, ಈ ವೇಳೆ ಆರೋಪಿಗಳು ಬೈಕನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಇದೀಗ ಅಂಗರಗುಂಡಿ ಸಮೀಪದಲ್ಲಿ ಬೈಕುಗಳನ್ನು ತಂದು ನಿಲ್ಲಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.