ಕರಾವಳಿ ತೀರದಲ್ಲಿ ಇನ್ನೂ ಚಂಡಮಾರುತದ ಭೀತಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಒಕ್ಕಿ ಚಂಡಮಾರುತದ ತೀವ್ರತೆಯ ಪರಿಣಾಮದಿಂದಾಗಿ ಕೆಳಸ್ಥರದಲ್ಲಿರುವ ಕರಾವಳಿ ಭಾಗಗಳಲ್ಲಿ ಇಂದು ರಾತ್ರಿ 11.30ರವರೆಗೂ ಚಂಡಮಾರುತದ ಭೀತಿ ಆವರಿಸದೆ.

ಸಾಗರ ಮಾಹಿತಿ ಸೇವೆಯ ಇಂಡಿಯನ್ ನೇಶನಲ್ ಸೆಂಟರ್ ಮತ್ತು ಹಮಾಮಾನ ಶಾಸ್ತ್ರ ಇಲಾಖೆ ಜಂಟಿಯಾಗಿ ಬಿಡುಗಡೆಗೊಳಿಸಲಾದ ವರದಿಯಲ್ಲಿ ಕೆಳಸ್ಥರದ ಪ್ರದೇಶಗಳಾದ ಉಡುಪಿ, ಮುರ್ಡೇಶ್ವರ, ಗೋಕರ್ಣ ಮತ್ತು ಮೌಶಿಂಗಳಲ್ಲಿ ಚಂಡಮಾರುತದ ತೀವ್ರತೆ ಹೆಚ್ಚಾಗಿರುತ್ತದೆ ಎಂದು ಹೇಳಿದೆ. ಈ ಅವಧಿಯಲ್ಲಿ ಕಡಲಿನಲ್ಲಿ ಮಂಗಳೂರಿನಿಂದ ಕಾರವಾರದವರೆಗೆ ಕರಾವಳಿ ಭಾಗದಲ್ಲಿ ಅಲೆಗಳ ತೀವ್ರತೆ 2.5 ಮೀಟರಿನಿಂದ 3.1

ಮೀಟರ್‍ವರೆಗೆ  ಇರುತ್ತದೆ.  ಇಂದು ಭಾರೀ ಗಾಳಿಯೊಂದಿಗೆ ಬಿರುಸಾದ ಮಳೆ ಕೂಡಾ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ. ಡಿಸೆಂಬರ್ 2ರವರೆಗೆ ಅವರು ತಾತ್ಕಾಲಿಕವಾಗಿ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದರು.

 

LEAVE A REPLY