ಸೈಕಲ್ ಸವಾರನಿಗೆ ಟಿಪ್ಪರ್ ಢಿಕ್ಕಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮಂದಾರ್ತಿ ಸಮೀಪದ ಕಾಡೂರು ಗ್ರಾಮ ತಂತ್ರಾಡಿ ನಿವಾಸಿ ಹರೀಶ್ ಭಟ್ (38) ಸೈಕಲ್ ಸವಾರಿ ಮಾಡಿಕೊಂಡು ಬರುತ್ತಿದ್ದ ವೇಳೆ ಶಿರೂರು ಮೂರುಕೈ ತಿರುವು ಬಳಿ ಹಿಂದಿನಿಂದ ಬಂದ ಟಿಪ್ಪರೊಂದು ಸೈಕಲಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸೈಕಲ್ ಸವಾರ ಹರೀಶ್ ಭಟ್ ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.