ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ಗ್ರಾ ಪಂ ವತಿಯಿಂದ ಕಚೇರಿ ಆವರಣದೊಳಗೆ ಶುಕ್ರವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಎಂಟು, ಒಂಭತ್ತು ಹಾಗೂ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸೈಕಲುಗಳನ್ನು ವಿತರಿಸಲಾಯಿತು.

ಜಿ ಎಚ್ ಎಸ್ ಉದ್ಯಾವರ ಶಾಲೆಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಕ್ಕಳಿಗೆ ಮತ್ತು ಜಿ ಎಚ್ ಎಸ್ ಬಂಗ್ರ ಮಂಜೇಶ್ವರ, ಜಿ ಎಚ್ ಎಸ್ ಕುಂಜತ್ತೂರು ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 36 ಮಂದಿಗೆ ಸೈಕಲನ್ನು ವಿತರಿಸಲಾಯಿತು. ಈ ಸಂದರ್ಭ ಪಂ ಸದಸ್ಯರ ಸಹಿತ ಹಲವರು ಉಪಸ್ಥಿತರಿದ್ದರು.

ಮಂಜೇಶ್ವರ ಗ್ರಾ ಪಂ ವತಿಯಿಂದ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುವ ಉದ್ದೇಶದಿಂದ ಪ್ರತೀ ವಾರ್ಡಿಗೂ ಒಂದು ಟ್ಯಾಂಕ್ ನೀರನ್ನು ವಿತರಿಸಲು ಪಂ ಸಿದ್ಧವಾಗಿದ್ದು, ಈಗಾಗಲೇ ಟ್ಯಾಂಕುಗಳು ಪಂ ಆವರಣದೊಳಗೆ ತಲುಪಿದೆ. ಶೀಘ್ರವೇ ಕುಡಿಯುವ ನೀರನ್ನು ಪ್ರತೀ ವಾರ್ಡಿಗೂ ಸಮರ್ಪಕ ರೀತಿಯಲ್ಲಿ ವಿತರಿಸಲು ಪ್ರಯತ್ನಿಸುವುದಾಗಿ ಪಂ ಅಧ್ಯಕ್ಷ ತಿಳಿಸಿದ್ದಾರೆ.