ಸದ್ಯವೇ ಉದಯ್-ನರ್ಗೀಸ್ ಮದುವೆ

ಉದಯ್ ಚೋಪ್ರಾ ಹಾಗೂ ನರ್ಗೀಸ್ ಫಕ್ರಿಯ ಕಣ್ಣುಮುಚ್ಚಾಲೆಯಾಟ ಈಗ ಕೆಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಇದೀಗ ಅವರಿಬ್ಬರೂ ಸದ್ಯವೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಿಂದ ಬಂದಿದೆ.

ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಉದಯ್ ಚೋಪ್ರಾ ಹಾಗೂ ನರ್ಗೀಸ್ ಫಕ್ರಿ ನಡುವೆ ಬ್ರೇಕಪ್ ಮತ್ತು ಪ್ಯಾಚಪ್ ಕೆಲವು ಸಲ ನಡೆದಿದೆ. ಆದರೆ ಅವರಿಬ್ಬರೂ ಈಗ ಹಲವು ಸಮಯದಿಂದ ಗುಟ್ಟಾಗಿ ಚೋಪ್ರಾರ ಜುಹು ಬಂಗಲೆಯಲ್ಲಿ ಜೊತೆಯಲ್ಲಿಯೇ ವಾಸಿಸುತ್ತಿದ್ದಾರೆÉ ಎನ್ನಲಾಗಿದೆ. ಎರಡು ವರ್ಷಗಳಿಂದ ಉದಯ್ ನರ್ಗೀಸ್ ಬಳಿ ಮದುವೆಗೆ ಒತ್ತಾಯಿಸುತ್ತಿದ್ದರೂ ಆಕೆ ಕಮಿಟ್ ಆಗಲು ಇಷ್ಟಪಡದೇ ಆಗೀಗ ತನ್ನ ಹೋಮ್ ಟೌನ್ ನ್ಯೂಯಾರ್ಕಿಗೆ ಮರಳುತ್ತಿದ್ದಳು. ಆದರೆ ಈಗ ಮತ್ತೆ ನರ್ಗೀಸ್ ಮುಂಬಯಿಗೆ ಬಂದಿದ್ದು ಈ ಬಾರಿ ಮದುವೆಯಾಗಲು ಮನಸ್ಸು ಮಾಡಿದ್ದಾಳಂತೆ. ಉದಯ್ ತಾಯಿ ಪಮೇಲಾ ಚೋಪ್ರಾರಿಗೂ ಅವರಿಬ್ಬರೂ ಮದುವೆಯಾಗಲು ಯಾವುದೇ ಸಮಸ್ಯೆಯಿಲ್ಲದ ಕಾರಣ ಹೊಸವರ್ಷದ ಆರಂಭದಲ್ಲಿ ಚೋಪ್ರಾ ಖಾಂದಾನಿಗೆ ಇನ್ನೊಬ್ಬಳು ಸೊಸೆ ಬರುವ ನಿರೀಕ್ಷೆ ಇದೆ. ಅಂದ ಹಾಗೆ ರಾಣಿ ಮುಖರ್ಜಿ ಹಿರಿಯ ಸೊಸೆ. ಆಕೆ ಯಶ್ ಚೋಪ್ರಾ-ಪಮೇಲಾ ಚೋಪ್ರಾರ ಹಿರಿಯ ಪುತ್ರ ಆದಿತ್ಯಾ ಚೋಪ್ರಾರನ್ನು 2014ರಲ್ಲಿ ಮದುವೆಯಾಗಿದ್ದು ಈಗ ಅವರಿಗೆ ಎರಡು ವರ್ಷದ ಅದಿರಾ ಎನ್ನುವ ಮಗಳಿದ್ದಾಳೆ.

`ರಾಕ್ ಸ್ಟಾರ್’ ಮೂಲಕ ಬಾಲಿವುಡ್ಡಿಗೆ ಎಂಟ್ರಿ ನೀಡಿರುವ ನರ್ಗೀಸ್, ಮತ್ತೆ `ಮೈ ತೆರಿ ಹೀರೋ’, `ಹೌಸ್ ಫುಲ್ 3′ ಮೊದಲಾದ ಹತ್ತರಷ್ಟು ಚಿತ್ರಗಳಲ್ಲಿ ನಟಿಸಿದ್ದಾಳೆ. ಉದಯ್ ಚೋಪ್ರಾ `ಧೂಮ್ ಸಿರೀಸ್’ ಹಾಗೂ ಕೆಲವು ಚಿತ್ರಗಳಲ್ಲಿ ನಟಿಸಿದ್ದು ಹೆಚ್ಚಾಗಿ ಆತ ಕಾಮಿಡಿ ಕ್ಯಾರೆಕ್ಟರ್ ಆಗಿಯೇ ಗುರುತಿಸಿಕೊಂಡಿದ್ದಾನೆ.