ಓವರ್ ಟೈಮ್ ಕೆಲಸ ನಿಲ್ಲಿಸಿದ ನೋಟು ಮುದ್ರಣಾ ಸಿಬ್ಬಂದಿ

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಸಲ್ಬೋನಿಯಲ್ಲಿರುವ ನೋಟು ಮುದ್ರಣಾ ಘಟಕದ ಸಿಬ್ಬಂದಿ ತಮ್ಮ ಆಡಳಿತದ ಮೇಲೆ ಒತ್ತಡ ಹೇರಿ ಓವರ್ ಟೈಮ್ ಕೆಲಸ ನಿಲ್ಲಿಸಿ ಮತ್ತೆ ಹಿಂದಿನ ಒಂಬತ್ತು ಗಂಟೆ ಅವಧಿಯ ಶಿಫ್ಟಿಗೆ ಮರಳಿದ್ದಾರೆ.

ನೋಟು ಅಮಾನ್ಯೀಕರಣಗೊಂಡಂದಿನಿಂದ ಅವರೆಲ್ಲಾ 12 ಗಂಟೆಗಳಷ್ಟು ಕಾಲ ಕೆಲಸ ಮಾಡುತ್ತಿದ್ದುದರಿಂದ ಅದು ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ನೌಕರರು ದೂರಿದ ಹಿನ್ನೆಲೆಂiÀiಲ್ಲಿ ಓವರ್ ಟೈಮ್ ಕೆಲಸ ನಿಲ್ಲಿಸಲಾಗಿದೆ. ಈ ನೋಟು ಮುದ್ರಣಾ ಘಟಕದಲ್ಲಿ ಒಟ್ಟು 700 ಕೆಲಸಗಾರರಿದ್ದರೆ, ಆಡಳಿತ ವಿಭಾಗದಲ್ಲಿ 500 ಮಂದಿ ಉದ್ಯೋಗಿಗಳಿದ್ದಾರೆ.