ಕುತೂಹಲ ಮೂಡಿಸಿದ ಯಡ್ಡಿಯೂರಪ್ಪ ನಡೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪರಿಗೆ ಒಂದು ವಿಷಯ ನಿಕ್ಕಿಯಾಗಿರಬಹುದು. ಅದೆಂದರೆ, ಮುಂದಿನ ಅಸೆಂಬ್ಲಿ ಚುನಾವಣೆ ನಂತರ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವುದು, ತಾವು ಮುಖ್ಯಮಂತ್ರಿ ಪಟ್ಟದಲ್ಲಿ ಕೂರುವುದು ಕಷ್ಟ ಎಂಬುದು. ಹೀಗಾಗಿ ಅವರು ತೆರೆಮರೆಯಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರೊಬ್ಬರ ಜತೆ ಮುಂದಿನ ರಾಜಕೀಯ ನಡೆಗಳ ಕುರಿತು ಚರ್ಚಿಸ ತೊಡಗಿದ್ದರಂತೆ.
ನಿಜ, ಯಡ್ಡಿಯೂರಪ್ಪ ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಸಂದರ್ಭ ಇನ್ನು ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ವೇದಿಕೆ ಸಿದ್ಧವಾಯಿತು. ಸ್ವ ಮತ್ತು ಕೇಂದ್ರದ ಗುಪ್ತದಳದ ಮಾಹಿತಿಯ ಅನುಸಾರವೇ ಅದು ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂಬ ಭಾವನೆ ಗಟ್ಟಿಯಾಗಿತ್ತು.
ಆದರೆ ಯಡ್ಡಿಯೂರಪ್ಪ ರಾಜ್ಯಾಧ್ಯಕ್ಷರಾದ ಕೂಡಲೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದರೆ ಕತೆ ಬೇರೆ ಇರುತ್ತಿತ್ತು

  • ಎಂ ಕೆ ಮಂಗಳೂರು