ಪ್ರತಿಭಟನೆ ಹತ್ತಿಕ್ಕುವುದು ಪ್ರಜಾಸತ್ತಾತ್ಮಕ ಕ್ರಮವಲ್ಲ

ನಮ್ಮದು ಪ್ರಜಾಸತ್ತಾತ್ಮಕ ರಾಷ್ಟ್ರ. ಸರಕಾರದ ವಿರುದ್ಧ ನಾನಾ ರೀತಿಯ ಅಸಮಾಧಾನಗಳಿರುತ್ತವೆ. ಸರಕಾರಕ್ಕೂ ಎಲ್ಲರನ್ನೂ ಏಕಕಾಲಕ್ಕೆ ತೃಪ್ತಿಗೊಳಿಸುವುದು ಸಾಧ್ಯವಿಲ್ಲದ ಮಾತು ಬೇಡಿಕೆಗಳನ್ನು ಈಡೇರಿಸುವಂತೆ ನೂರಾರು ಸಂಘಟನೆಗಳು ವರ್ಷಪೂರ್ತಿ ಪ್ರತಿಭಟನೆ ನಡೆಸಿರುತ್ತವೆ. ಎಲ್ಲರೂ ಎಲ್ಲ ಕಾಲಕ್ಕೆ ಸರಕಾರಕ್ಕೆ ಶರಣಾಗಿದ್ದರೆ ಅದನ್ನು ಎಚ್ಚರಿಸುವವರು ಯಾರು ಸರಕಾರ ಸಾಗುತ್ತಿರುವ ಹಾದಿ ಸರಿಯಲ್ಲ ಎಂದು ಹೇಳುವವರೇ ಇಲ್ಲದಿದ್ದಲ್ಲಿ ಕ್ರಮೇಣ ಹಿಟ್ಲರ್ ಆಡಳಿತವಾಗಿ ಪರಿಣಮಿಸುತ್ತದೆ. ಸಾರ್ವಜನಿಕವಾಗಿ ಎಚ್ಚರಿಕೆಯ ಮಾತುಗಳು ಕೇಳಿ ಬಂದಾಗ ತಪ್ಪನ್ನು ತಿದ್ದಿಕೊಂಡು ಹೋಗಬೇಕಾದ್ದು ಸರಕಾರದ ಕರ್ತವ್ಯ ಏಕೆಂದರೆ ಸರಕಾರವು ಜನರಿಂದ ಆಯ್ಕೆಯಾದದ್ದು. ಆದ್ದರಿಂದ ಜನರ ಧ್ವನಿ ಕೇಳಬೇಕಾದ್ದು ಸರಕಾರದ ಕೆಲಸ ಈಗ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದರೆ, ಪ್ರತಿಪಕ್ಷವಾಗಿ ಬಿಜೆಪಿ ಕರ್ತವ್ಯ ನಿರ್ವಹಿಸುತ್ತಿದೆ. ಸರಕಾರವನ್ನು ನಿರಂತರವಾಗಿ ಎಚ್ಚರಿಸದೇ ಇದ್ದರೆ ಪ್ರತಿಪಕ್ಷ ಏಕಿರಬೇಕು ಸರಕಾರದ ಜತೆ ಶಾಮೀಲಾಗಿರಬೇಕು ಎಂದು ಯಾರಾದರೂ ಬಯಸಿದರೆ ಅದು ಮೂರ್ಖತನವಾದೀತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಇದನ್ನೇ ಬಯಸಿರಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ಬೈಕುಗಳಲ್ಲಿ ಹೊರಟು ಸೆಪ್ಟೆಂಬರ್ ಏಳರಂದು ಮಂಗಳೂರು ಸೇರುವುದು ಬಿಜೆಪಿ ಉದ್ದೇಶವಾಗಿತ್ತು ಪರಿವಾರ ಕಾರ್ಯಕರ್ತರ ಕಗ್ಗೊಲೆಗೆ ಕಾರಣವಾದ ಪಿಎಫೈ ಎಸ್ಡಿಪಿಐ ಕೆಎಫ್ಡಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಯುವ ಮೋರ್ಚಾ ಕಾರ್ಯಕರ್ತರು ಚಳುವಳಿ ಮಾಡುವುದು ತಪ್ಪಾ ಹೀಗೆ ಚಳುವಳಿಗೆ ಇಳಿದು ಬೈಕುಗಳಲ್ಲಿ ಸಾಗುವ ಕಾರ್ಯಕರ್ತರು ಹಿಂಸಾಚಾರಕ್ಕೆ ಇಳಿಯಬಹುದು ಎಂದು ಸರಕಾರ ಊಹಿಸಲು ಕಾರಣಗಳು ಯಾವುವು ಗುಪ್ತಚರ ಇಲಾಖೆ ಈ ಮಾಹಿತಿ ಕೊಟ್ಟಿದ್ದಾರೆ ಎನ್ನುವುದಾದರೆ ಅದು ಹಾಸ್ಯಾಸ್ಪದ ಮತ್ತು ದುರುದ್ದೇಶಪೂರಿತ ಅಥವಾ ಸರಕಾರವೇ ಹೇಳಿ ರೂಪಿಸಿದ ಮಾಹಿತಿ ರವಾನೆ ಎನ್ನಬೇಕಷ್ಟೇ

  • ಕೆ ದಿನೇಶ್ ಕಾಮತ್
    ಬಂಟ್ವಾಳ ಮುಖ್ಯಪೇಟೆ