ಹೆಣ್ಣಿಗೆ ಸಂಸ್ಕತಿ ಪಾಠ ಹೇಳುವ ಪಾಲಕರು ಗಂಡು ಮಕ್ಕಳ ಬಗ್ಗೆ ಮೌನಿಗಳೇಕೆ

Mother and daughter having an argument

ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ಕಾಮುಕರ ಅಟ್ಟಹಾಸ ಸಮಾಜದಲ್ಲಿ ನೈತಿಕತೆ ಅಧಃಪತನದ ಚರ್ಚೆಯೊಂದಿಗೆ ಮತ್ತೊಂದು ಮಗ್ಗುಲಿನಿಂದ ಸ್ತ್ರೀ ಸಮಾನತೆಯ ಚರ್ಚೆಯನ್ನೂ ಚಾಲ್ತಿಗೆ ತಂದಿದೆ  ಮದ್ಯಪಾನ  ರಾತ್ರಿ ಸಂಚಾರ  ಮನರಂಜನೆ  ಉಡುಪು ಇತ್ಯಾದಿ ವಿಷಯಗಳಲ್ಲಿ ಗಂಡಸಿನಂತೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥಳು ಎಂದು ಪುರುಷ ಸಮಾಜ ಭಾವಿಸಿದಂತಿದೆ ಹೆಣ್ಣಿಗೆ ಸಂಸ್ಕøತಿ ಮಡಿವಂತಿಕೆಯ ಪಾಠ ಹೇಳುವ ಪಾಲಕರು ತಮ್ಮ ಗಂಡು ಮಕ್ಕಳ ವಿಷಯದಲ್ಲಿ ಮಾತ್ರ ಮೌನ ತಾಳುವುದು ಏಕೆ   ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ಕಾರ್ಯನಿರ್ವಹಿಸುವ ಸ್ತ್ರೀಯರಿಗೆ ಹೊಸ ವರ್ಚಾಚರಣೆಯಂಥ ಸಂಭ್ರಮದಲ್ಲಿ ಪುರುಷರಂತೆ ಭಾಗವಹಿಸಲು ಅರ್ಹತೆ ಇಲ್ಲ ಎಂದು ಹೇಳುತ್ತಿರುವವರು ಏನನ್ನು ಸಮರ್ಥಿಸುತ್ತಿದ್ದಾರೋ ಯೋಚಿಸಲಿ  ಅದಕ್ಕೂ ಮೊದಲು  ಎಲ್ಲದಕ್ಕೂ ಹೆಣ್ಣನ್ನು ದೂರುವ ಖಯಾಲಿ ಮೊದಲು ನಿಲ್ಲಲಿ

  • ಕೆ ಸುಜೀತ್ ಕೋಟ್ಯಾನ್