ಕ್ರಶರ್ ಕಾರ್ಮಿಕಗೆ ಕಲ್ಲು ಬಿದ್ದು ಗಾಯ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಕಲ್ಯಾ ಗ್ರಾಮದ ಅಗಸ್ತ್ಯ ಕ್ರಶರಿನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಕಾರ್ಮಿಕನಿಗೆ ಕೆಲಸ ಮಾಡುತ್ತಿದ್ದ ವೇಳೆ ಕೈಗೆ ಶಿಲೆಕಲ್ಲು ಬಿದ್ದು ಗಾಯಗಳಾಗಿದೆ.

ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ನಾಟ್ವಾ ಗ್ರಾಮದ ರಾಜ (20) ಎಂಬಾತ ಫೆ 11ರಂದು ಕ್ರಶರ್ ಯಂತ್ರಕ್ಕೆ ಗ್ರೀಸಿಂಗ್ ಮಾಡುವಾಗ ಘಟನೆ ನಡೆದಿದೆ. ಕ್ರಶರ್ ಮಾಲಿಕರಾದ ನಾರಾಯಣ್ ಪ್ರಭು ಹಾಗೂ ಮ್ಯಾನೇಜರ್ ವಿಜಯನ್ ಎಂಬವರ ನಿರ್ಲಕ್ಷ್ಯತನದಿಂದ ಈ ದುರ್ಘಟನೆ ನಡೆದಿದೆ ಎಂದು ಗಾಯಾಳು ರಾಜ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.