ಪತ್ರಕರ್ತರ ಬಂಡವಾಳ ಜಾಹೀರು ಮಾಡಿದ ಮುಖ್ಯಮಂತ್ರಿಗೆ ಕಾಗೆ ಹಿಕ್ಕೆ ಮಾಡಿದ ವರದಿ

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈಯವರ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎರಡೂ ರಾಜ್ಯ ಸರಕಾರಗಳು ರಾಷ್ಟ್ರಕವಿಯ ಜನ್ಮಭೂಮಿಗೆ ನೀಡಿದ ಕೊಡುಗೆ ಅವಿಸ್ಮರಣೀಯವಾದುದು. ಇಂತಹ ಮಹಾನುಭಾವ ನೆಲೆಸಿದ್ದ ಮನೆಯ ಪುನಜ್ಜೀವನಗೊಳಿಸಿ, ಬಳಿಯಲ್ಲಿ ಭವ್ಯ ಸಾರ್ವಜನಿಕರಿಗೆ ಉಪಯೋಗವಾಗುವ ಮುಂದಿರ ರಚನೆಯೂ ಮುಂದಿನ ದಿನಗಳಲ್ಲಿ ಸಾಹಿತ್ಯ, ಲಲಿತಾಕಲೆ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗುತ್ತದೆ. ಹಲವಾರು ಯೋಜನೆಗಳಿಗಾಗಿ ಎರಡು ರಾಜ್ಯಗಳ ಸರಕಾರದ ಸಂಪೂರ್ಣ ಸಹಕಾರವಿರುವುದು ಗೋವಿಂದ ಪೈಯವರಿಗೆ ನೀಡುವ ಗೌರವವಾಗಿದೆ.
ಹೀಗಿದ್ದರೂ ಸಮಾರಂಭದಲ್ಲಿ ಮರದ ಮೇಲಿನ ಕಾಗೆಯೊಂದು ಸಿದ್ಧರಾಮಯ್ಯನವರ ಪಂಚೆ ಮೇಲೆ ಹಿಕ್ಕೆ ಹಾಕಿರುವುದು ಇಂಗ್ಲಿಷ್ಕಕನ್ನಡ ದಿನಪತ್ರಿಕೆಗಳಲ್ಲಿ ಮತ್ತು ಟೀವಿ ವಾಹಿನಿಗಳಲ್ಲಿ `ಬ್ರೇಕಿಂಗ್ ನ್ಯೂಸ್’ ಆದದ್ದು ವಿಪರ್ಯಾಸ. ವರದಿಗಾರರು, ಛಾಯಾಚಿತ್ರಗಾರರು, ಸೆರೆಹಿಡಿದ ಚಿತ್ರಸಹಿತ ಬಾಕ್ಸ್ ವರದಿ ಮಾಡಿದ್ದು, ಪತ್ರಿಕಾ ಸಂಪಾದಕರು ಇದೊಂದು `ಅಭೂರ್ವ ಘಟನೆ’ ಎಂದು ಪ್ರಕಟಿಸಿರುವುದು ಎಷ್ಟು ಸರಿ  ಗೋವಿಂದ ಪೈಯವರ ಸಾಹಿತ್ಯ ಸಂಶೋಧನೆ-ಅಧ್ಯಯನದ ಬಗ್ಗೆ ಎಳ್ಳಷ್ಟು ಮಾಹಿತಿಯಿಲ್ಲದ  ಪ್ರೆಸ್ ಟಿಪ್ಪಣಿ ಆಧಾರವಷ್ಟೆ ವರದಿಗಾರರ ಬಂಡವಾಳ  ವರದಿಗಾರರು ಕಾಗೆ ಹಿಕ್ಕೆ ಮಾಡಿದ ಶಕುನವನ್ನು ಮುತುವರ್ಜಿಯಿಂದ ವರದಿ ಮಾಡಿರುವುದು ಪತ್ರಕರ್ತರ ಮನಸ್ಥಿತಿಃ ಏನೆಂದು ತೋರಿಸುತ್ತದೆ. ಪತ್ರಿಕಾ ಸಂಪಾದಕರು ಇಂತಹ ವರದಿಗಳಿಗೆ ಪ್ರಥಮ ಆದ್ಯತೆಯ ಮನ್ನಣೆ ನೀಡುವಂತಾಗಿದ್ದು ಪತ್ರಕರ್ತರ ಬಂಡವಾಳವೂ ಜಾಹೀರಾಗಿದೆ

  • ಕೆ ಸುರೇಶ  ಮಂಜೇಶ್ವರ