ಯಡ್ಡಿ ವಿರುದ್ಧ ಕ್ರಿಮಿನಲ್ ಕೇಸು

ಗುಂಡ್ಲುಪೇಟೆ : ಗುಂಡ್ಲುಪೇಟೆ ಉಪ-ಚುನಾವಣಾ ಪ್ರಚಾರದ ವೇಳೆ ರೈತನೊಬ್ಬನ ವಿಧವಾ ಪತ್ನಿಗೆ ಒಂದು ಲಕ್ಷ ರೂ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಗುಂಡ್ಲುಪೇಟೆ ಉಪ-ಚುನಾವಣಾ ನಿರ್ವಚನಾಧಿಕಾರಿ ನಳಿನ್ ಅತುಲ್ ಕ್ರಿಮಿನಲ್ ಪ್ರಕರಣವೊಂದು ದಾಖಲಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಾಯಕ ವೆಂಕಟೇಶ್ ದೂರು ನೀಡಿದ್ದರು. ರೈತರಿಗೆ ಪರಿಹಾರ ನೀಡುವ ನೆಪವೊಡ್ಡಿ, ಮತದಾರರಿಗೆ ಆಮಿಷ ಒಡ್ಡಿದ್ದರೆಂದು ವೆಂಕಟೇಶ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.