ಜನಪ್ರಿಯ ಧಾರಾವಾಹಿ ನಟ ಆತ್ಮಹತ್ಯೆಗೆ ಶರಣ

ನವದೆಹಲಿ : ಸೋನಿ ಟೀವಿಯಲ್ಲಿ ಪ್ರಸಾರವಾಗುವ ಕ್ರೈಂ ಪೆಟ್ರೋಲ್ ಧಾರಾವಾಹಿಯಲ್ಲಿ ಪೆÇಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದ ಕಮಲೇಶ್ ಪಾಂಡೆ ಅವರು ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಕಂಠಪೂರ್ತಿ ಕುಡಿದಿದ್ದರು ಎಂದು ತಿಳಿದುಬಂದಿದೆ. ಆದರೆ, ಆತ್ಮಹತ್ಯೆಯ ಕಾರಣ ಗೊತ್ತಾಗಿಲ್ಲ. ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮಧ್ಯಪ್ರದೇಶದ ಜಬಲ್ಪುರದ ಸಂಜೀವಿನಿ ನಗರದ ತಮ್ಮ ನಿವಾಸದಲ್ಲಿ ಪಾಂಡೆ ಅವರು ಆತ್ಮಹತ್ಯ್ಗೆ ಶರಣಾಗಿದ್ದು, ಮೇಲ್ನೋಟಕ್ಕೆ ವೈಯಕ್ತಿಕ ಕಾರಣಗಳು ಇರಬಹುದು ಎಂದು ತಿಳಿದುಬಂದಿದೆ. ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಪಾಂಡೆ ಅವರ ಪತ್ನಿ ಹಾಗೂ ಮಕ್ಕಳು ಚತುರ್ವೇದಿ ಉಪಸ್ಥಿತರಿದ್ದರು.

ಕುಡಿದ ಮತ್ತಿನಲ್ಲಿ ಮನೆಯವರ ಜತೆ ಗಲಾಟೆ ಮಾಡಿಕೊಂಡಿದ್ದ ಕಮಲೇಶ್ ಒಂದು ಸುತ್ತಿನ ಗುಂಡನ್ನು ಗಾಳಿಯಲ್ಲಿ ಹಾರಿಸಿ ನಂತರ ಮತ್ತೊಂದ್ದನ್ನು ನೇರವಾಗಿ ಎದೆಯೊಳಗೆ ಇಳಿಸಿಕೊಂಡಿದ್ದಾರೆ. ಕಮಲೇಶ್ ಅವರನ್ನು ಬದುಕಿಸಲು ಅವರ ಕುಟುಂಬ ತಕ್ಷಣವೇ ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಸೇರಿಸಲು ಯತ್ನಿಸಿ, ವಿಫಲರಾಗಿದ್ದಾರೆ.