ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಪರಾಧ ಕೃತ್ಯ ಹೆಚ್ಚಳ : ಬಿಜೆಪಿ

ಬೆಂಗಳೂರು : ಕಳೆದ ನಾಲ್ಕು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಜನರ ಆಶೋತ್ತರಗಳಿಗೆ ತಕ್ಕಂತೆ ನಡೆದಿಲ್ಲ ಮತ್ತು ಎಲ್ಲ ರಂಗಗಳಲ್ಲೂ ವೈಫಲ್ಯ ಕಂಡಿದೆ ಎಂದು ಬಿಜೆಪಿ ಆರೋಪಿಸಿತು. “ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಅಪರಾಧ ಮತ್ತು ಹಫ್ತಾ ವಸೂಲಿ ಪ್ರಕರಣಗಳು ಅಧಿಕಗೊಂಡಿವೆ. ಕಳೆದ ನಾಲ್ಕು ವರ್ಷದಲ್ಲಿ ಬೆಂಗಳೂರೊಂದರಲ್ಲೇ 1.24 ಲಕ್ಷ ಕ್ರಿಮಿನಲ್ ಪ್ರಕರಣಗಳು ನಡೆದಿವೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ 3,102 ಅತ್ಯಾಚಾರ ಪ್ರಕರಣ ಮತ್ತು 2,534 ಮಹಿಳೆಯರ ಕೊಲೆ ಪ್ರಕರಣಗಳು ನಡೆದಿವೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಪಾದಿಸಿದರು.

ಬಿಜೆಪಿ ನಿನ್ನೆ ಕಾಂಗ್ರೆಸ್ ವಿರುದ್ಧ 64 ಪುಟಗಳ ಆಡಳಿತ ವೈಫಲ್ಯದ `ಆರೋಪಪಟ್ಟಿ’ ಬಿಡುಗಡೆಗೊಳಿಸಿತು. ಮೇ 13ಕ್ಕೆ ಸೀಎಂ ಸಿದ್ದರಾಮಯ್ಯ ಅಧಿಕಾರಕ್ಕೆ  ನಾಲ್ಕು ವರ್ಷವಾಗಲಿದೆ.