2016ರಲ್ಲಿ ಜನಾಕ್ರೋಶಕ್ಕೆ ಕಾರಣವಾದ ಅಪರಾಧ ಘಟನೆಗಳು

26/06/2016, TAMILNADU, CHENNAI: MEMBERS OF KNOWLEDGE PROFESSIONAL FORUM ORANISED A CANDLE LIGHT CAMPAINGE FOR S SWATHI, AN IT PROFESSIONAL WHO WAS HACKED TO DEATH BY AN UNIDENTIFIED MAN AT NUNGAMBAKKAM RAILWAY STATION. EXPRESS /ASHWIN PRASATH

ಜಗತ್ತು ಇನ್ನೊಂದು ಹೊಸ ವರ್ಷಕ್ಕೆ  ನವ ಉಲ್ಲಾಸದಿಂದ ಹೆಜ್ಜೆಯಿರಿಸಿದೆ. ಆದರೆ ಕಳೆದ ವರ್ಷ ನಡೆದ ಬೆಚ್ಚಿ ಬೀಳಿಸುವಂತಹ  ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದಂತಹ ಹಲವು  ಅಪರಾಧ ಘಟನೆಗಳು ಇನ್ನೂ ಜನಮಾನಸದಿಂದ ಮರೆಯಾಗಿಲ್ಲ. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.


ಗ್ರೇಟರ್ ನೊಯ್ಡಾ ಅತ್ಯಾಚಾರ ಪ್ರಕರಣ

 ಪಶ್ಚಿಮ ಗ್ರೇಟರ್ ನೊಯ್ಡಾದ ಟಿಗ್ರಿ ಗ್ರಾಮದಲ್ಲಿ ಮಾರ್ಚ್ 7ರಂದು 16 ವರ್ಷದ  ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದ 18 ವರ್ಷದ ಯುವಕನೊಬ್ಬ ನಂತರ ಆಕೆಯನ್ನು ಬೆಂಕಿ ಹಚ್ಚಿ ಸಾಯಿಸಲು ಂiÀiತ್ನಿಸಿದ್ದ. ಶೇ 95ರಷ್ಟು ಸುಟ್ಟ ಗಾಯಗಳಾಗಿದ್ದ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಆರೋಪಿ ಯುವಕ ಸಂತ್ರಸ್ತೆಯ ನೆರೆಮನೆಯವನೇ ಆಗಿದ್ದು ಆಕೆಯೊಂದಿಗೆ  ಸ್ನೇಹದಿಂದಿದ್ದ. ಆಕೆಯನ್ನು ಮನೆಯ ಟೆರೇಸಿಗೆ  ಕರೆದಿದ್ದ ಯುವಕ ಅಲ್ಲಿ ಈ ಹೇಯ ಕೃತ್ಯ ಎಸಗಿದ್ದ. ಆತನನ್ನು ಬಂಧಿಸಲಾಗಿದೆ.


ಮಥುರಾ ಹಿಂಸಾಚಾರ

  ಮಥುರಾದ ಜವಾಹರ್ ಬಾಘ್ ಸಾರ್ವಜನಿಕ ಪಾರ್ಕ್ ಪ್ರದೇಶದಲ್ಲಿ ಬೇರು ಬಿಟ್ಟಿದ್ದ ರಾಮ್ ವೃಕ್ಷ್  ಪಂಥದ ಮಂದಿಯನ್ನು ತೆರವುಗೊಳಿಸಲು ಕೈಗೊಂಡ ಕ್ರಮ ಹಿಂಸೆಗೆ ತಿರುಗಿದ ಪರಿಣಾಮ ಇಬ್ಬರು ಪೊಲೀಸರೂ ಸೇರಿದಂತೆ 24 ಮಂದಿ ಮೃತಪಟ್ಟಿದ್ದರು. ಘಟನೆ ಜೂನ್ 2ರಂದು ನಡೆದಿತ್ತು. ಈ ಪ್ರದೇಶವನ್ನು 2014ರಿಂದ ರಾಮ್ ವೃಕ್ಷ್ ಅತಿಕ್ರಮಿಸಿಕೊಂಡಿದ್ದು ಅಲ್ಲಿ  ಪಯಾರ್ಯ ಸರಕಾರ ಮಾದರಿಯಲ್ಲಿಯೇ ಆಡಳಿತ ನಡೆಸುತ್ತಿದ್ದ. ಆತ ಕೆಲ ರಾಜಕಾರಣಿಗಳೋಂದಿಗೆ ಹತ್ತಿರದ ಸಂಬಂಧ ಹೊಂದಿದ್ದನೆನ್ನಲಾಗಿದೆ. ನ್ಯಾಯಾಲಯದ ಆದೇಶದಂತೆ ಸ್ಥಳ ತೆರವಿಗೆ ಪೊಲಿಸರು ಧಾವಿಸಿದ್ದರು. ಸಾವಿಗೀಡಾದ  ಪೊಲೀಸ್ ಅಧಿಕಾರಿಗಳಲ್ಲಿ  ಎಸ್ಪ್ಪಿಯೊಬ್ಬರೂ ಸೇರಿದ್ದರು.

crime-1


ಬಿಹಾರ ಟಾಪರ್ಸ್ ಹಗರಣ

 ಮೇ 31ರಂದು ಹೊರಜಗತ್ತಿನ ಮುಂದೆ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ ಟಾಪರ್ಸ್ ಹಗರಣ ಬಂದಾಗ ಹಲವರು ಬೆಚ್ಚಿ  ಬಿದ್ದಿದ್ದರು. ಹ್ಯುಮಾನಿಟೀಸ್ ವಿಭಾಗದಲ್ಲಿ ಟಾಪರ್ ಆಗಿದ್ದ ರೂಬಿ ರಾಯ್, ವಿಜ್ಞಾನ ವಿಷಯದ ಟಾಪರ್ ಸೌರಭ್ ಶ್ರೇಷ್ಠ ಹಾಗೂ ಮೂರನೇ ರ್ಯಾಂಕ್ ವಿಜೇತ ರಾಹುಲ್ ಕುಮಾರ್ ಅವರನ್ನು ಟಿವಿ ವಾಹಿನಿಗಳು  ಮಾತನಾಡಿಸಿದಾಗ ಅವರಿಗೆ ಕೆಲ ಮೂಲಭೂತ ಪ್ರಶ್ನೆಗಳಿಗೇ ಉತ್ತರ ತಿಳಿದಿಲ್ಲ ಎಂಬುದು ಸ್ಪಷ್ಟವಾಗಿತ್ತು.


ಡೆಲ್ಟಾ ಮೇಘ್ವಾಲ್ ಅತ್ಯಾಚಾರ ಪ್ರಕರಣ

 ಬಿಕಾನೇರ್ ಜಿಲ್ಲೆಯ ನೋಖಾ ಪಟ್ಟಣದಲ್ಲಿ ತನ್ನ ಶಿಕ್ಷಕನಿಂದಲೇ ಅತ್ಯಾಚಾರಕ್ಕೊಳಗಾಗಿದ್ದ 17 ವರ್ಷದ ದಲಿತ  ವಿದ್ಯಾರ್ಥಿನಿಯೊಬ್ಬಳ ಶವ  ಮಾರ್ಚ್ 27ರಂದು ನೀರಿನ ಟ್ಯಾಂಕ್ ಒಂದರಲ್ಲಿ ಪತ್ತೆಯಾಗಿತ್ತು. ಆಕೆ ವಾಸವಾಗಿದ್ದ ಹಾಸ್ಟೆಲ್ ವಾರ್ಡನ್ ಆಕೆಯ ಜಾತಿಯನ್ನು ನಿಂದಿಸಿದ್ದಲ್ಲದೆ ದೈಹಿಕ ಶಿಕ್ಷಕರ ಕೊಠಡಿಯನ್ನು ಶುಚಿಗೊಳಿಸುವಂತೆ ಆಕೆಗೆ ಆದೇಶಿಸಿದ್ದು ಆಕೆ ಅಲ್ಲಿಗೆ ಹೋದಾಗ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತೆಂದು ದೂರಲಾಗಿತ್ತು. ರಾಜ್ಯ ಸರಕಾರ ಇದೊಂದು ಆತ್ಮಹತ್ಯೆ ಪ್ರಕರಣವೆಂದು ವಾದಿಸಿತ್ತು, ಸಿಬಿಐ ತನಿಖೆಗೆ ದಲಿತ ಸಮುದಾಯ ಕೋರಿದ್ದರೂ ಇಲ್ಲಿಯವರೆಗೆ ಯಾವುದೇ ಬೆಳವಣಿಗೆಯಿಲ್ಲ.


 ಜಾರ್ಖಂಡ್ ದನ ಸಾಗಾಟಗಾರರ ಮೇಲೆ ಹಲ್ಲೆ

 ಮಾರ್ಚ್ 18ರಂದು ಜಾರ್ಖಂಡ್ ರಾಜ್ಯದ ಲಾಟೆಹಾರ್ ಜಿಲ್ಲೆಯಲ್ಲಿ ಇಬ್ಬರು ಮುಸ್ಲಿಂ  ದನ ಸಾಗಾಟಗಾರರು  ಗೋ ರಕ್ಷಕರ  ಅಟ್ಟಹಾಸಕ್ಕೆ ಬಲಿಯಾಗಬೇಕಾಯಿತು. 32 ವರ್ಷದ ಮಝ್ಲೂಂ ಅನ್ಸಾರಿ ಹಾಗೂ 15 ವರ್ಷದ ಇಮ್ತಿಯಾಜ್ ಖಾನ್ ಅವರ ಮೃತ ದೇಹಗಳು ಮರವೊಂದಕ್ಕೆ  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಪೊಲೀಸರು ಈ ಸಂಬಂಧ ಐದು ಮಂದಿಯನ್ನು ಬಂಧಿಸಿದ್ದರು.


ಜಿಶಾ ಕೊಲೆ ಪ್ರಕರಣ

ಕೇರಳದ ಪೆರುಂಬವೂರಿನಲ್ಲಿ ಎಪ್ರಿಲ್ 28, 2016ರಂದು  29 ವರ್ಷದ ದಲಿತ ಕಾನೂನು ವಿದ್ಯಾರ್ಥಿನಿ ಜಿಶಾ ಭೀಕರವಾಗಿ ಕೊಲೆಯಾಗಿದ್ದಳು. ಆಕೆಯ ದೇಹವನ್ನು ಕೊಚ್ಚಿ ಹಾಕಲಾಗಿತ್ತು.  ಈ ಆಘಾತಕಾರಿ ಪ್ರಕರಣದ ಸಂಬಂಧ ಪೊಲೀಸರು ಅಮೀರುಲ್ ಇಸ್ಲಾಂ ಎಂಬ ಅಸ್ಸಾಮಿ ಕಾರ್ಮಿಕನನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ  ಅನಾರುಲ್ ಇಸ್ಲಾಂ ಎಂಬವನೂ ಭಾಗಿಯಾಗಿದ್ದು ಆತ ತಪ್ಪಿಸಿಕೊಂಡಿದ್ದಾನೆನ್ನಲಾಗಿದೆ.  ಆದರೆ ಆತನನ್ನು ಅನಗತ್ಯವಾಗಿ ಬಲಿಪಶು ಮಾಡಲಾಗಿದೆ ಎಂಬ ದೂರೂ ಇದೆ. ಪೊಲೀಸ್ ತನಿಖೆ ಸಮಾಧಾನಕಾರಿಯಾಗಿಲ್ಲವೆಂದು ಜಿಶಾ ತಂದೆ ಈ ಕೊಲೆ ಪ್ರಕರಣದ ಸಿಬಿಐ ತನಿಖೆ ಆಗ್ರಹಿಸಿದ್ದರು.


ಸ್ವಾತಿ ಕೊಲೆ ಪ್ರಕರಣ

 ಇನ್ಫೋಸಿಸ್ ಕಂಪೆನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ 24 ವರ್ಷದ ಸ್ವಾತಿಯನ್ನು ಚೆನ್ನೈನ ನುಂಗಂಬಕ್ಕಂ ರೈಲ್ವೇ ನಿಲ್ದಾಣದಲ್ಲಿ  ಜೂನ್ 24ರಂದು ಯುವಕನೊಬ್ಬ ಎಲ್ಲರ ಕಣ್ಣೆದುರೇ ಕೊಲೆಗೈದಿದ್ದ. ಘಟನೆ ನಡೆದು ಒಂದು ವಾರದ ತರುವಾಯ ಸ್ವಾತಿಯ ಬೆನ್ನು ಬಿದ್ದಿದ್ದನೆನ್ನಲಾದ ರಾಮ್ ಕುಮಾರ್ ಎಂಬವನನ್ನು ಬಂಧಿಸಲಾಗಿತ್ತು. ಇದಾದ ಒಂದು ವಾರದಲ್ಲಿಯೇ ಆತ ಜೈಲಿನೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದು ಹಲವು ಸಂಶಯಗಳಿಗೆ ಕಾರಣವಾಗಿತ್ತು.