ಗೋಳಿಜೋರದಲ್ಲಿ ಕ್ರಿಕೆಟ್ ಟೂರ್ನಿ ಜ 22, 29ಕ್ಕೆ

 

ಮುಲ್ಕಿ : ಶ್ರೀ ರಾಮ ಯುವಕ ವೃಂದ (ರಿ.) ಗೋಳಿಜೋರ, ಕಿನ್ನಿಗೋಳಿ ಇದರ ಆಶ್ರಯದಲ್ಲಿ ಜನವರಿ 22, ಭಾನುವಾರ ಹಾಗೂ 29 ಭಾನುವಾರ ವಲಯ ಮತ್ತು ಅಂತರ್ ಜಿಲ್ಲಾ ಮಟ್ಟದ ನಿಗದಿತ 6 ಓವರುಗಳ ಓವರ್ ಆರ್ಮ್ ಎಸ್ ಆರ್ ವೈ ವಿ ಟ್ರೋಫಿ-2017 ಕ್ರಿಕೆಟ್ ಪಂದ್ಯಾಟ ಶ್ರೀ ಶಾರದಾ ಪ್ರೌಢಶಾಲಾ ಮೈದಾನ ಶಿಮಂತೂರು, ಕಿನ್ನಿಗೋಳಿಯಲ್ಲಿ ನಡೆಯಲಿದೆ. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ 50,000, 30,000 ನಗದು, ಟ್ರೋಫಿ ಸೇರಿದಂತೆ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಪ್ರವೇಶ ಶುಲ್ಕ : ವಲಯ ಮಟ್ಟದ ತಂಡಗಳಿಗೆ 3000, ಜಿಲ್ಲಾ ಮಟ್ಟದ ತಂಡಗಳಿಗೆ 5000. ಆಸಕ್ತ ತಂಡಗಳು ಜನವರಿ 10, 2017ರೊಳಗಾಗಿ ಈ ಕೆಳಗಿನವರನ್ನು ಸಂಪರ್ಕಿಸಲು ಕೋರಲಾಗಿದೆ : ಚಂದ್ರಶೇಖರ್ : 7892073944, ಪ್ರಕಾಶ್ : 9945935922, ಯೋಗೀಶ್ : 8105528609 ಶ್ರೀಪತಿ : 9663184921 : ದಿನೇಶ್ 9901754936.