ಮಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಸಾಲ ಶಿಬಿರ

ಮಂಗಳೂರು : ಸಿಂಡಿಕೇಟ್ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ರಿಟೈಲ್ ಎಂ ಎಸ್ ಎಂ ಇ, ಎಸ್ ಎಚ್ ಜಿ ಸಾಲ ಶಿಬಿರ ಕಾರ್ಯಕ್ರಮವನ್ನು ಬ್ಯಾಂಕಿನ ಫೀಲ್ಡ್ ಜನರಲ್ ಮೇನೇಜರ್ ಸತೀಶ್ ಕಾಮತ್ ನೆರವೇರಿಸಿದರು.

ವಿವಿಧ ಯೋಜನೆಯಲ್ಲಿ ಆಯ್ದ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರವನ್ನು ವಿತರಿಸಿ ಮಾತನಾಡಿದ ಅವರು ಪಡಕೊಂಡ ಸಾಲವನ್ನು ಸದ್ಭಳಕೆ ಮಾಡಿಕೊಂಡು ಉದ್ದೇಶಿತ ಗುರಿ ಸಾಧಿಸಿ ಜೊತೆಗೆ ಪಡಕೊಂಡ ಸಾಲದ ಮರುಪಾವತಿಯ ಬಗ್ಗೆಯೂ ಮನವರಿಕೆ ಮಾಡಿದರು.

ಬ್ಯಾಂಕಿನ ಉಪ ಮಹಾಪ್ರಬಂಧಕ ಎನ್ ಸೀತಾರಾಮ ಸೋಮಯಾಜಿ ಸ್ವಾಗತಿಸಿದರು. ಸಹಾಯಕ ಮಹಾಪ್ರಬಂಧಕ ಬಿ ನಾರಾಯಣ ರಾವ್ ವಂದಿಸಿದರು. ಪ್ರಬಂಧಕ ಟಿ ಕೆ ಮುರಲೀಧರನ್ ಕಾರ್ಯಕ್ರಮ ನಿರೂಪಿಸಿದರು.