ಸಂತಸ ಜೀವನ ನಿಮ್ಮದಾಗಿಸಬೇಕೇ ?

ಬದುಕು ಬಂಗಾರ – 4

ಎಲ್ಲರೂ ಸಂತೋಷದ ಜೀವನಕ್ಕಾಗಿ ಹಂಬಲಿಸುತ್ತಾರೆ. ಅದಕ್ಕಾಗಿ  ಹಲವಾರು ಕಸರತ್ತುಗಳನ್ನೂ ನಡೆಸುತ್ತಾರೆ. ಆದರೆ ನಮ್ಮ ಸಂತೋಷ ನಿಜವಾಗಿಯೂ ಯಾವುದನ್ನು ಅವಲಂಬಿಸಿದೆ ಎಂಬುದು ತಿಳಿದಿದೆಯೇ ? ಅದು ನಮ್ಮ ಅಭ್ಯಾಸಗಳಲ್ಲಿ. ಈ ನಮ್ಮ ಅಭ್ಯಾಸಗಳೇ ನಮ್ಮನ್ನು  ಸಂತಸದಿಂದಿರುವಂತೆ ಮಾಡುತ್ತವೆ, ಯಶಸ್ಸನ್ನು ನಮ್ಮದಾಗಿಸುತ್ತದೆ ಇಲ್ಲವೇ ನಮ್ಮ ಜೀವನದ ಗುರಿ ತಲುಪುವಲ್ಲಿ ಅಡ್ಡಿಗಳನ್ನು ತಂದೊಡ್ಡುತ್ತದೆ.

ಖ್ಯಾತ ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಹೇಳಿದಂತೆ “ವಿ ಆರ್ ವಾಟ್ ವಿ ರಿಪೀಟೆಡ್ಲಿ ಡು, ಗ್ರೇಟ್ನೆಸ್ ದೆನ್, ಈಸ್ ನಾಟ್ ಎನ್ ಆಕ್ಟ್, ಬಟ್ ಎ ಹ್ಯಾಬಿಟ್.” (ನಾವು ಸತತವಾಗಿ ಮಾಡುವುದೇ ನಾವಾಗಿರುತ್ತೇವೆ. ಹಿರಿಮೆಯೆನ್ನುವುದು ಒಂದು ಕೃತ್ಯವಲ್ಲ, ಬದಲಾಗಿ ಒಂದು ಅಭ್ಯಾಸ.”

ಕೆಲ ಅಭ್ಯಾಸಗಳು ಜೀವನದಲ್ಲಿ ನಮಗೆ ಹೆಚ್ಚಿನ ಸಂತಸವನ್ನು ನೀಡುತ್ತದೆ. ಅವುಗಳ್ಯಾವುವು ಎನ್ನುವ ತವಕವೇ ? ಇಲ್ಲಿವೆ ಓದಿ.

  1. ಪ್ರತಿ ದಿನ ನೀವು ಕೃತಜ್ಞರಾಗಿರಬೇಕಾದ ಮೂರು ವಿಚಾರಗಳ ಬಗ್ಗೆ ಬರೆದಿಡಿ : ನಿಮ್ಮ ಜೀವನದಲ್ಲಿರುವ ವಸ್ತುಗಳ ಬಗ್ಗೆ ನೀವು ಕೃತಜ್ಞರಾಗಿರುವುದರಿಂದ ನಿಮ್ಮ ಮನಸ್ಸಿಗೆ ಮುದ ದೊರೆಯುತ್ತದೆ. ಅದು ನಿಮ್ಮನ್ನು ಜೀವನದಲ್ಲಿ ಆಶಾವಾದಿಯನ್ನಾಗಿಸುತ್ತದೆ.
  2. ಸುಮ್ಮನೆ ನಡೆದಾಡಿ, ಇಲ್ಲವೇ ನಕ್ಷತ್ರಗಳತ್ತ ನೋಟ ಹರಿಸಿ : ಹೌದು, ವಿಸ್ಮಯವೆನ್ನುವುದು ನಮ್ಮ ಮನಸ್ಸಿನಲ್ಲಿರುವ ಒತ್ತಡಗಳನ್ನು ಕಡಿಮೆಗೊಳಿಸುತ್ತದೆ. ಅದಕ್ಕೆ ನೀವು ಮಾಡಬೇಕಾದದ್ದಿಷ್ಟೆ. ಸುಮ್ಮನೆ ನಕ್ಷತ್ರಗಳತ್ತ ದಿಟ್ಟಿಸಿ ನೋಡಿ, ಇಲ್ಲವೇ ಬೆಟ್ಟದ ತುದಿಯಲ್ಲಿ ನಿಂತು ಸುತ್ತಲಿನ ದೃಶ್ಯವನ್ನು ಆಸ್ವಾದಿಸಿ.
  3. ಧ್ಯಾನ ಮಾಡಿ : ಸ್ವಲ್ಪ ಹೊತ್ತು ಏಕಾಗ್ರತೆಯಿಂದ ಧ್ಯಾನ ಮಾಡಿ. ಇದು ನಿಮ್ಮಲ್ಲಿರುವ ಖಿನ್ನತೆ ಹಾಗೂ  ಆತಂಕವನ್ನು ದೂರವಾಗಿಸುತ್ತದೆ.
  4. ಸಾಹಸ ಕಥೆಯನ್ನು ಓದಿ : ಸಂಶೋಧನೆಗಳ ಪ್ರಕಾರ ಸ್ಫೂರ್ತಿದಾಯಕ ಕಥೆಗಳು ನಮ್ಮ ಮನಸ್ಸಿಗೆ ಮುದ ನೀಡುತ್ತವೆ, ಇದು ಒತ್ತಡವನ್ನು ನಿವಾರಿಸಲೂ ಸಹಕಾರಿ ಎನ್ನುತ್ತಾರೆ ತಜ್ಞರು.
  5. ಸಂತಸದಿಂದಿರುವಾಗ ಮಾಡುವ ಕಾರ್ಯಗಳನ್ನು ಇತರ ಸಮಯದಲ್ಲೂ ಮಾಡಿ : ಸಕಾರಾತ್ಮಕ ಚಿಂತನೆಗಳು ಜೀವನದಲ್ಲಿ ಹಲವು ವಿಧದಲ್ಲಿ ಸಹಕಾರಿ. ಇವು ಋಣಾತ್ಮಕ ಚಿಂತನೆಗಳನ್ನು ದೂರವಾಗಿಸುತ್ತದೆ.

6  ನಿಮ್ಮ ಭಾವನೆಗಳನ್ನು ಬರೆದಿಡಿ : ನಮ್ಮ ಮನಸ್ಸಿನಲ್ಲಿದ್ದುದನ್ನು ಹೇಳಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಅವುಗಳನ್ನು ಬರೆದಿಡಿ. ಮನಸ್ಸು ನಿರಾಳವಾಗಿ ಬಿಡುತ್ತದೆ ಎನ್ನುತ್ತಾರೆ ಸಂಶೋಧಕರರು.

  1. ಇತರರ ಮೇಲೆ ಹಣ ವಿನಿಯೋಗಿಸಿ : ಮನಸ್ಸು ಸರಿಯಿಲ್ಲ ಎಂದು ತೋಚಿದಾಗ ಹಲವರು ಶಾಪಿಂಗ್ ಹೋಗುತ್ತಾರೆ. ಆದರೆ ಶಾಪಿಂಗಿಗೆ ಹಣ ಖರ್ಚು ಮಾಡುವ ಬದಲು ಆ ಹಣವನ್ನು ಅಗತ್ಯವಿರುವ ಬೇರೆ ಯಾರಿಗಾದರೂ ನೀಡಿದರೆ ಮನಸ್ಸಿಗಾಗುವ ಸಮಾಧಾನ ಅಷ್ಟಿಷ್ಟಲ್ಲ.