ಕಣ್ಣೂರಿನಲ್ಲಿ ಭುಗಿಲೆದ್ದ ಘರ್ಷಣೆ ಸಿಪಿಎಂ ಕಾರ್ಯಕರ್ತರಿಗೆ ಇರಿತ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಸದಾ ರಾಜಕೀಯ ಘರ್ಷಣೆ ಕೇಂದ್ರವಾಗಿ ಮಾರ್ಪಡುತ್ತಿರುವ ಕಣ್ಣೂರು ಜಿಲ್ಲೆಯ ಪಾನೂರಿನಲ್ಲಿ ಮತ್ತೆ ರಾಜಕೀಯ ಘರ್ಷಣೆ ಭುಗಿಲೆದ್ದು ಮೂವರು ಸಿಪಿಎಂ ಕಾರ್ಯಕರ್ತರು ಇರಿತಕ್ಕೊಳಗಾಗಿದ್ದಾರೆ
ಪಾನೂರು ಪರಪ್ಪ ನಿವಾಸಿಗಳಾದ ಆಶ್ವನ್  ಅತುಲ್ ಮತ್ತುರಂಜಿತ್ ಎಂಬ ಯುವಕರು ಇರಿತಕ್ಕೊಳಗಾಗಿದ್ದು, ಅವರನ್ನು ಗಂಭೀರಾವಸ್ಥೆಯಲ್ಲಿ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ
ಭಾನುವಾರ ಮುಂಜಾನೆ 3 ಗಂಟೆ ವೇಳೆ ಈ ಘಟನೆ ನಡೆದಿದೆ  ಈ ಮೂವರು ಶನಿವಾರ ರಾತ್ರಿ ನಡೆದ ಹೊಸ ವರ್ಷಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮುಂಜಾನೆ 3 ಗಂಟೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ತಂಡವೊಂದು ಅವರನ್ನು ತಡೆದು ಇರಿದು ಗಂಭೀರ ಗಾಯಗೊಳಿಸಿದೆ ಗಾಯಗೊಂಡವರನ್ನು ಊರವರು ತಕ್ಷಣ ಸಮೀಪದ ಆಸ್ಪತ್ರೆಗೆ ಒಯ್ದು ನಂತರ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು
ಈ ಘಟನೆಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಸಿಪಿಎಂ ಆರೋಪಿಸಿದೆ  ಘರ್ಷಣೆ ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸದಿರಲು ಪಾನೂರು ಮತ್ತು ಪರಿಸರ ಪ್ರದೇಶಗಳಲ್ಲಿ ಬಿಗಿ ಪೆÇಲೀಸ್ ಕಾವಲು ಮತ್ತು ಭದ್ರತೆ ಏರ್ಪಡಿಸಲಾಗಿದೆ