ಸಿಪಿಎಂ ಕಾರ್ಯಕರ್ತನ ಬೈಕ್ ತಡೆದು ನಿಲ್ಲಿಸಿ ಹಲ್ಲೆ

ಹಲ್ಲೆಗೊಳಗಾದ ವೇಣುಗೋಪಾಲ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಸಿಪಿಎಂ ಲೋಕಲ್ ಕಮಿಟಿ ಸದಸ್ಯನೊಬ್ಬ ಸಂಚರಿಸುತ್ತಿದ್ದ ಬೈಕನ್ನು ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ.

ಬಾಡೂರು ತಲಮುಗರು ನಿವಾಸಿ ವೇಣುಗೋಪಾಲ್ (42) ಹಲ್ಲೆಗೊಳಗಾದ ವ್ಯಕ್ತಿ. ಬಾಡೂರು ಶಾಲೆಯಲ್ಲಿ ಕಲೋತ್ಸವ ನಡೆಯುತ್ತಿದ್ದ ಮಧ್ಯೆ ಅಡುಗೆ ಮನೆಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ವೇಣುಗೋಪಾಲ್ ತಡೆದಿದ್ದರು. ಈ ವಿಚಾರವಾಗಿ ಎರಡು ಮಂದಿಯ ತಂಡ ಶಿವಪ್ರಸಾದ್ ಸಂಚರಿಸುತ್ತಿದ್ದ ಬೈಕನ್ನು ತಡೆದು ಹಲ್ಲೆಗೈದು ಜತೆಯಾಗಿದ್ದ ಪತ್ನಿ ಹಾಗೂ ಮಗುವನ್ನು ದೂಡಿ ಹಾಕಿರುವುದಾಗಿಯೂ ದೂರಲಾಗಿದೆ.