ಸಿಪಿಎಂ, ಕಾಂಗ್ರೆಸ್ ಕಚೇರಿಗಳಿಗೆ ಹಾನಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪುಲ್ಲೂರು ಪೆರಿಯ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಕಾಂಗ್ರೆಸ್ ಮತ್ತು ಸಿಪಿಎಂ ಕಚೇರಿಗಳಿಗೆ ದಾಳಿ ನಡೆದಿದ್ದು, ಹಾನಿಗೊಳಿಸಲಾಗಿದೆ.

ಕಲ್ಯೋಟಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿರುವ ಯುವಜನ ವಾದ್ಯ ಕಲಾಸಂಘ ಹಾಗೂ ವಾಚನಾಲಯ ಕಟ್ಟಡಗಳಿಗೆ ಕಿಚ್ಚಿಟ್ಟು ಹಾನಿಗೊಳಿಸಲಾಗಿದೆ. ಈ ಕೃತ್ಯವನ್ನು ಸಿಪಿಎಂ ಕಾರ್ಯಕರ್ತರು ನಡೆಸಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.

ಇದರ ಬೆನ್ನಲ್ಲೇ ಕಲ್ಯೋಟ್ ಬಳಿ ಉದ್ಘಾಟನೆಗೆ ಸಿದ್ಧಗೊಂಡ ಸಿಪಿಎಂ ನೇತೃತ್ವದ ಎಕೆಜಿ ಆಟ್ರ್ಸ್ ಆ್ಯಂಡ್ ಸ್ಪೋಟ್ರ್ಸ್ ಕ್ಲಬ್ ಕಟ್ಟಡವನ್ನು ತಂಡವೊಂದು ಹಾನಿಗೈದಿದೆ. ಕಿಟಕಿ, ಬಾಗಿಲುಗಳನ್ನು ಹಾನಿ ಮಾಡಿದ್ದು, ನಷ್ಟ ಸಂಭವಿಸಿದೆ. ಅದೇ ರೀತಿ ಪೆರಿಯಡ್ಕ ಹಾಗೂ ನಿಡುವೋಟುಪಾರದಲ್ಲಿ ಕಾಂಗ್ರೆಸ್ ಕಚೇರಿಗಳಿಗೆ ಹಾನಿ ಮಾಡಲಾಗಿದೆ. ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.