ಸಿಪಿಎಂ-ಬಿಜೆಪಿ ಘರ್ಷಣೆ : 13 ಮಂದಿ ವಿರುದ್ಧ ಕೇಸು

ಕಾಸರಗೋಡು : ಅಡೂರು ಕೋರಿಕಂಡದಲ್ಲಿ ಸಿಪಿಎಂ-ಬಿಜೆಪಿ ಕಾರ್ಯಕರ್ತರ ಮಧ್ಯೆ ನಡೆದ ಘಷಣೆಗೆ ಸಂಬಂಧಿಸಿ ಪೆÇಲೀಸರು 13 ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.

ಬಿಜೆಪಿ ಕಾರ್ಯಕರ್ತೆ ರಮಣಿ ಎಂಬವರಿಗೆ ಬೆದರಿಕೆಯೊಡ್ಡಿದ ಆರೋಪದಂತೆ ಸಿಪಿಎಂ ಕಾರ್ಯಕರ್ತರಾದ ಶಿವಪ್ಪ ನಾಯ್ಕ್, ಚಂದ್ರ ಎಂಬಿವರ ವಿರುದ್ಧ, ಸಿಪಿಎಂ ಕಾರ್ಯಕರ್ತ ತೆಕ್ಕೇಮೂಲೆಯ ಗಂಗಾಧರರನ್ನು ಮನೆಗೆ ನುಗ್ಗಿ ಬೆದರಿಕೆಯೊಡ್ಡಿದ ಆರೋಪದಂತೆ ಬಿಜೆಪಿ ಕಾರ್ಯಕರ್ತರಾದ ನಾರಾಯಣನ್, ಪ್ರಭಾಕರನ್, ಮಹೇಶ್ ಸಹಿತ ಎಂಟು ಮಂದಿ ವಿರುದ್ಧ, ಸಿಪಿಎಂ ಕಾರ್ಯಕರ್ತ ಚಂದ್ರಶೇಖರರನ್ನು ತಡೆದುನಿಲ್ಲಿಸಿ ಹಲ್ಲೆಗೈದ ಆರೋಪದಂತೆ ರಾಜು, ಮಹೇಶ್, ಪ್ರಭಾಕರನ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ಅಡೂರು, ಪರಿಸರ ಸ್ಥಳಗಳಲ್ಲಿ ಒಂದು ವಾರದಿಂದ ಸಿಪಿಎಂ ಹಾಗೂ ಬಿಜೆಪಿಯ ಧ್ವಜ, ತೋರಣಗಳನ್ನು ನಾಶಗೊಳಿಸುವ ಕೃತ್ಯ ನಿತ್ಯ ನಡೆಯುತ್ತಿದೆಯೆಂಬ ಆರೋಪಗಳಿವೆ. ಇದು ಘರ್ಷಣೆಗೆ ಕಾರಣವಾಗುತ್ತಿದೆ.

LEAVE A REPLY