ಮಂಗಳೂರಿನಲ್ಲಿ ಸಿಪಿಎಲ್ ಕ್ರಿಕೆಟ್ ಟೂರ್ನಿಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇದೀಗ ಎಲ್ಲೆಡೆ ಐಪಿಎಲ್ ಕ್ರಿಕೆಟ್ ಹವಾ ಇದ್ದರೆ, ಇತ್ತ ಮಂಗಳೂರಿನಲ್ಲಿ  ಸಿಪಿಎಲ್ ಜೋರಾಗಿದೆ. ಇದೇ ಮೊತ್ತಮೊದಲ ಬಾರಿಗೆ ತುಳು ಚಿತ್ರರಂಗದ ಮಂದಿ ಜೊತೆಯಾಗಿ ಬಣ್ಣದ ಲೋಕದಿಂದ ಹೊರಬಂದು ಕ್ರಿಕೆಟ್ ಅಂಗಣದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡುತ್ತಿದ್ದಾರೆ.

ಕೋಸ್ಟಲ್ ಪ್ರೀಮಿಯರ್ ಲೀಗ್ (ಸಿಪಿಎಲ್) ನೆಹರೂ ಮೈದಾನದಲ್ಲಿ ನಡೆಸುತ್ತಿರುವ ಟೂರ್ನಿಗೆ ಮಂಗಳವಾರ  ಚಾಲನೆ ಸಿಕ್ಕಿದೆ. ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಹೀಗೆ ತುಳುಚಿತ್ರರಂಗದ ಎಲ್ಲರೂ ಈ ಕ್ರಿಕೆಟ್ ಟೂರ್ನಮೆಂಟನಲ್ಲಿ ಪಾಲ್ಗೊಂಡಿದ್ದಾರೆ.

ನಟರಾದ ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ, ಆಸ್ತಿಕ್ ಶೆಟ್ಟಿ, ಪೃಥ್ವಿ ಅಂಬರ್, ಶ್ರವಣ್ ಕದ್ರಿ, ಸುರಭಿ ಭಂಡಾರಿ, ಪ್ರಕಾಶ್ ಶೆಟ್ಟಿ ಧರ್ಮನಗರ, ಅನೂಪ್ ಸಾಗರ್ ಹೀಗೆ ಹಲವು ಮಂದಿ ಇಲ್ಲಿನ ಮೈದಾನದಲ್ಲಿ ತಾರಾ ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಹಿರಿಯ ಕಲಾವಿದರು ಕೂಡಾ ಈ ಆಟಕ್ಕೆ ಸಾಥ್ ನೀಡಲಿದ್ದಾರೆ.

ಮಾರ್ಚ್ 15ರಂದು ಫಾರಂಪಿಜ್ಜಾ ಮಾಲನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿತ್ತು. ವಿಜೇತ ತಂಡವು ಆಕರ್ಷಕ ಟ್ರೋಫಿಯೊಂದಿಗೆ ಎರಡು ಲಕ್ಷ ರೂ ನಗದು ಬಹುಮಾನವನ್ನು ಪಡೆದುಕೊಳ್ಳಲಿದೆ. ದ್ವಿತೀಯ ವಿಜೇತರು ಒಂದು ಲಕ್ಷ ರೂ.ಬಹುಮಾನ ಪಡೆದುಕೊಳ್ಳಲಿದ್ದಾರೆ.