ಮಂಜೇಶ್ವರದ ರೈಲ್ವೇ ನಿಲ್ದಾಣಗಳ ಅವಗಣನೆ ವಿರುದ್ಧ ಸಿಪಿಐ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ತಾಲೂಕಿನ ಹಾಗೂ ಉತ್ತರ ಕೇರಳದ ಕೊನೆಯ ಮೂರು ರೈಲ್ವೇ ನಿಲ್ದಾಣಗಳು  ಅಭಿವೃದ್ಧಿಯಿಂದ ವಂಚಿತವಾಗುತ್ತಿದ್ದು, ಇದು ಖಂಡನೀಯ. ಅಭಿವೃದ್ಧಿಗೆ ಅಗತ್ಯವಿರುವ ಕ್ರಮಕ್ಕೆ ಸಂಬಂಧಪಟ್ಟವರು ಮುಂದಾಗಬೇಕೆಂಬುದಾಗಿ ಸಿಪಿಐ ಮುಖಂಡರು ಆಗ್ರಹಿಸಿದ್ದು, ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಜೇಶ್ವರ ಮಂಡಲ ಸಮ್ಮೇಳನದಲ್ಲೂ ಅಂಗೀಕರಿಸಿದ ನಿರ್ಣಯದಲ್ಲಿ ಒತ್ತಾಯಿಸಿದೆ.

ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳ ಪ್ರಮುಖ ಸ್ಥಳಗಳಲ್ಲಿ ತ್ಯಾಜ್ಯಗಳು ತುಂಬಿ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಹಲವು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ. ತ್ಯಾಜ್ಯ ನಿರ್ಮೂಲನಕ್ಕೆ ಗ್ರಾ ಪಂ.ಗಳು ಮುಂದಾಗುತ್ತಿಲ್ಲವೆಂಬುದಾಗಿ ಸಮ್ಮೇಳನ ಆರೋಪಿಸಿದೆ.

ಬರಲಿರುವ ಹೊಸ ಮಲೆನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯಾನಗರ-ಮುಡಿಪು ರೂಟಿನಲ್ಲಿ ಎರಡು ರಾಜ್ಯಗಳ ರಸ್ತೆ ಸಾರಿಗೆ ಬಸ್ಸುಗಳು ಸಂಚರಿಸು ವಂತಾಗಿರಬೇಕಾಗಿ ಸಮ್ಮೇಳನ ಅಂಗೀಕರಿಸಿದ ಮತ್ತೊಂದು ನಿರ್ಣಯದಲ್ಲಿ ಒತ್ತಾಯಿಸಿದೆ.

ಕಾಸರಗೋಡು ತನಕ ಬರುವ ಜಲಮಾರ್ಗವನ್ನು ತಲಪಾಡಿ ತನಕ ವಿಸ್ತರಿಸುವಂತೆ ಸಮ್ಮೇಳನ ಒತ್ತಾಯಿಸಿದೆ.

ಸುಬ್ಬರಾವ್ ನಗರದಲ್ಲಿ ನಡೆದ ಸಮ್ಮೇಳನದಲ್ಲಿ ಜಿಲ್ಲಾ ನೇತಾರರ ಸಹಿತ ಹಲವಾರು ಮಂದಿ ಕಾರ್ಯಕರ್ತರು ಪಾಲ್ಗೊಂಡರು.

 

LEAVE A REPLY