ತೋಟದಲ್ಲಿ ಕಟ್ಟಿಹಾಕಲಾಗಿದ್ದ ಹಸು ಆಡು ಕಳವು ದೂರು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ತೋಟದಲ್ಲಿ ಕಟ್ಟಿ ಹಾಕಲಾಗಿದ್ದ ಹಸು, ಆಡುಗಳನ್ನು ಕಳವುಗೈದಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಮಧೂರು ಪುಳಿಕ್ಕೂರು ಅಬ್ದುಲ್ ಖಾದರ್ ಎಂಬವರ ಮನೆಗೆ ಸಮೀಪವೇ ಇರುವ ತೋತದಲ್ಲಿ ಕಟ್ಟಿ ಹಾಕಲಾಗಿದ್ದ ಹಸು ಹಾಗೂ ಎರಡು ಆಡುಗಳನ್ನು ಕಳವುಗೈಯ್ಯಲಾಗಿದೆ. ರಾತ್ರಿ ವೇಳೆ ಕಳವು ನಡೆದಿರಬಹುದಾಗಿ ಶಂಕಿಸಲಾಗಿದೆ. ಮುಂಜಾನೆ ಮಸೀದಿಗೆ ತೆರಳುವಾಗ ಕಳವು ನಡೆದಿರುವುದು ಗಮನಕ್ಕೆ ಬಂದಿದೆ. 50 ಸಾವಿರ ರೂ ಬೆಲೆಯ ಹಸು ಹಾಗೂ 20 ಸಾವಿರ ರೂ ಬೆಲೆಯ ಆಡು ಕಳವಾಗಿರುವುದಾಗಿ ಅಬ್ದುಲ್ ಖಾದರ್ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದಾರೆ.