ಗರ್ಭಿಣಿ ಅತ್ಯಾಚಾರ, ಕೊಲೆ ಕೇಸು : ಫೆ 20ರಂದು ಶಿಕ್ಷೆ ಪ್ರಮಾಣ ಪ್ರಕಟ

ಸಾಂದರ್ಭಿಕ ಚಿತ್ರ

ಕುಂದಾಪುರ : ಎಪ್ರಿಲ್ 11, 2015ರಂದು ಗೋಪಾಡಿ ಗ್ರಾಮದ ಪಡುಗೋಪಾಡಿ ಲಿಂಗಜ್ಜಿ ಮನೆ ಎಂಬಲ್ಲಿನ ಮನೆಯೊಂದರಲ್ಲಿ ಒಂಟಿಯಾಗಿದ್ದ ಗರ್ಭಿಣಿಯ ಮೇಲೆ ಅತ್ಯಾಚಾರಗೈದು ನಂತರ ಅಮಾನುಷವಾಗಿ ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಶಾಂತ್ ಮೊಗವೀರ  ಎಂಬಾತನನ್ನು ಈಗಾಗಲೇ ದೋಷಿಯೆಂದು ಘೊಷಿಸಿರುವ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಘೋಷಿಸಿದ್ದು ಆತನ ಶಿಕ್ಷೆಯ ಪ್ರಮಾಣವನ್ನು ಫೆ 20ರಂದು ಪ್ರಕಟಿಸಲಿದೆ.ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಪ್ರಶಾಂತನನ್ನು ಬಂಧಿಸಿದ್ದ ಪೊಲೀಸರು ಆತ ಸಂತ್ರಸ್ತೆ ಇಂದಿರಾಳ  ಕುತ್ತಿಗೆಯಲ್ಲಿದ್ದ ಸರವನ್ನೂ ಸೆಳೆದಿದ್ದನೆಂದೂ ಕಂಡುಕೊಂಡಿದ್ದರು  ಆರೋಪಿ ಮುಂದೆ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ, ಆತನಿಗೆ ಜಾಮೀನು ನಿರಾಕರಿಸಲಾಗಿತ್ತು. ಆತನ ವಿರುದ್ಧ ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿದ್ದವು. ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರನ್ನು ಈ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬ ಹಾಗೂ ಸರಕಾರದ ಪರ ವಾದಿಸಲು ವಿಶೇಷ ಸಾರ್ವಜನಿಕ ಅಭಿಯೋಜಕರನ್ನಾಗಿ ನೇಮಿಸಲಾಗಿತ್ತು.

LEAVE A REPLY