ಜಿಲ್ಲಾ ನ್ಯಾಯಾಲಯ ರಸ್ತೆ ಫೆಬ್ರವರಿ ಅಂತ್ಯದೊಳಗೆ ಪೂರ್ಣ : ಲೋಬೊ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬಹಳಷ್ಟು ವರ್ಷಗಳಿಂದ ಬೇಡಿಕೆಯಿರುವ ಜಿಲ್ಲಾ ನ್ಯಾಯಾಲಯದ ರಸ್ತೆಯ ಅಭಿವೃದ್ಧಿ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಈ ರಸ್ತೆಯು ಕಿರಿದಾಗಿದ್ದು, ನ್ಯಾಯಾಲಯಕ್ಕೆ ಬರುವ ಜನರ ವಾಹನಗಳಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು. ಕಕ್ಷಿದಾರರು, ವಕೀಲರು ನ್ಯಾಯಾಲಯಕ್ಕೆ ಸರಿಯಾದ ಸಮಯದಲ್ಲಿ ಬರಲು ತೊಂದರೆಯಾಗುತ್ತಿತ್ತು. ಕಾಮಗಾರಿಯನ್ನು ವೀಕ್ಷಿಸಲು ಶನಿವಾರ ಆಗಮಿಸಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ ಆರ್ ಲೋಬೊ, “ಜಿಲ್ಲಾ ನ್ಯಾಯಾಲಯಕ್ಕೆ ಬರುತ್ತಿರುವ ವಕೀಲರು ಹಾಗೂ ಸಾರ್ವಜನಿಕರು ಈ ರಸ್ತೆಯು ಅತ್ಯಂತ ಕಿರಿದಾಗಿದ್ದು, ಇದನ್ನು ಅಗಲೀಕರಿಸಿ, ಅಭಿವೃದ್ಧಿಪಡಿಸಬೇಕೆಂದು ನನ್ನಲ್ಲಿ ಹಲವಾರು ಬಾರಿ ಮನವಿ ಸಲ್ಲಿಸಿದ್ದರು. ಇದನ್ನರಿತು ನಾನು ಸರಕಾರದ ಮಟ್ಟದಲ್ಲಿ ಮಾತನಾಡಿ, ಲೋಕೋಪಯೊಗಿ ಇಲಾಖೆಯಿಂದ ಈ ರಸ್ತೆ ಅಭಿವೃದ್ಧಿಗೆ ರೂ 11 ಕೋಟಿ ಹಣವನ್ನು ಮಂಜೂರು ಮಾಡಿದೆ. ಪ್ರಸಕ್ತ ರಸ್ತೆಯು ಕಾಮಗಾರಿಯು ಭರದಿಂದ ಸಾಗುತ್ತಲಿದ್ದು, ಫಬ್ರವರಿ ಅಂತ್ಯದೊಳಗೆ ಪೂರ್ತಿಗೊಳಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸುಮಾರು 280 ಮೀಟರ್ ಉದ್ದದ ರಸ್ತೆಯಾಗಿದ್ದು, ಇದರ ಅಗಲ 12 ಮೀಟರ್ ಆಗಿರುತ್ತದೆ. ಫುಟ್ಪಾತ್ ಮತ್ತು ನೀರು ಹರಿಯುವ ತೋಡು ಮಾಡಲಾಗುವುದು. ಅಗಲೀಕರಣ ಕಾಮಗಾರಿ ಪೂರ್ತಿಯಾದ ಕೂಡಲೇ ರಸ್ತೆ ಕಾಂಕ್ರೀಟಕರಣಗೊಳಿಸಲಾಗುವುದು” ಎಂದರು.

 

LEAVE A REPLY